Latest

ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ವಿಧಿವಶ

ಪ್ರಗತಿವಾಹಿನಿ ಸುದ್ದಿ; ಕಾಸರಗೋಡು: ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇಂದು ಮುಂಜಾನೆ ದೈವಾದೀನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಯಕ್ಷಗಾನದ ಅಭಿಮಾನಿಯಾಗಿದ್ದ ಶ್ರೀಗಳು ಅತ್ಯುತ್ತಮ ಭಾಗವತರಾಗಿದ್ದರು. ಯಕ್ಷಗಾನ‌ ಕಲಾವಿದರ ಬದುಕು ಬವಣೆಗಳಿಗೆ ಇನ್ನಿಲ್ಲದಂತೆ ಸ್ಪಂದಿಸಿದ ಅನನ್ಯ ಉದಾರಿಯಾಗಿದ್ದರು.

ಕೆಲದಿನಗಳ ಹಿಂದಷ್ಟೇ ತಮ್ಮ 60ನೇ ಚಾತುರ್ಮಾಸ ವ್ರತಾಚರಣೆಯನ್ನು ಶ್ರೀಗಳು ಸಮಾಪ್ತಿಗೊಳಿಸಿದ್ದರು. ಹಲವು ಸವಾಲುಗಳ ನಡುವೆ ಗಡಿ ನಾಡು ಕಾಸರಗೋಡಿನ ಎಡನೀರಿನಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ್ದರು.

ರಾಜ್ಯದಲ್ಲಿ ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ, ಉಡುಪಿ, ಪುತ್ತೂರು, ಬೆಂಗಳೂರಿನಲ್ಲಿ ಕೇಶವಾನಂದ ಸ್ವಾಮಿಜಿಯವರ ಅಪಾರ ಭಕ್ತ ಸಮೂಹವೇ ಇದ್ದು, ಶ್ರೀಗಳ ಅಗಲಿಕೆಗೆ ಭಕ್ತ ವೃಂದ ಕಂಬನಿ ಮಿಡಿದಿದೆ.

Related Articles

Back to top button