Latest

ಮುಂದಿನ ವಾರ ಡ್ರಗ್ಸ್ ತನಿಖೆಗೆ ಮಹತ್ವದ ವಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ದಂಧೆ ವಿರುದ್ಧ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ. ಮುಂದಿನ ವಾರ ತನಿಖೆಗೆ ಮಹತ್ವದ ವಾರವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿರುದ್ಧ ಇನ್ನಷ್ಟು ಕಾರ್ಯಾಚಾರಣೆ ಚುರುಕುಗೊಳ್ಳಲಿದೆ. ಬೇರೆ ರಾಜ್ಯದಿಂದ ಬರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಗಡಿ ಜಿಲ್ಲೆಗಳ ಪೊಲೀಸರಿಗೆ ಸೂಚಿಸಿದ್ದೇವೆ. ತನಿಖೆಗೆ ಗುಪ್ತಚರ ಇಲಾಖೆ ಪೊಲೀಸರನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಇಂದ್ರಜಿತ್ ಲಂಕೇಶ್, ಪ್ರಶಾಂತ್ ಸಂಬರಗಿಯಿಂದ ಅಸಮರ್ಪಕ ಮಾಹಿತಿ ವಿಚಾರವಾಗಿ ಮಾತನಾಡಿದ ಸಚಿವರು, ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸಾಮಾಜ ಜಾಗೃತವಾಗಿರಬೇಕು. ಡ್ರಗ್ಸ್ ವಿಚಾರವಾಗಿ ಯಾವುದೇ ಮಾಹಿತಿ, ಯಾರದೇ ಹೆಸರು ಬಂದರೂ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

Related Articles

Back to top button