ಪ್ರಗತಿವಾಹಿನಿ ಸುದ್ದಿ, ಗೋಕಾಕ: ಸೋದರ ಸಂಬಂಧಿಗಳಿಬ್ಬರ ನಡುವಿನ ಕ್ಷುಲ್ಲಕ ಜಗಳ ಮಾರಾಮಾರಿಗೆ ತಿರುಗಿ ಓರ್ವನ ಕೊಲೆಯಲ್ಲಿ ಪರ್ಯವಸಾನವಾಗಿದೆ.
ಗೋಕಾಕ ಫಾಲ್ಸ್ ನ ವಾಲ್ಮೀಕಿನಗರದಲ್ಲಿ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಆರೋಪಿ ತಿಲಕ್ ಎಂಬಾತ ತನ್ನ ಸೋದರ ಸಂಬಂಧಿ ಚೇತನ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕಳೆದ ರಾತ್ರಿ ಇವರಿಬ್ಬರೂ ಕುಡಿದ ಮತ್ತಿನಲ್ಲಿ ಒಂದೇ ಮನೆಯಲ್ಲಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಚೂರಿ ಇರಿತದ ಹಂತ ತಲುಪಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನಿಂದ ಕೊಲೆಗೆ ಬಳಸಿದ ಚೂರಿ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ 10 ಗ್ರಾಮ, ಶಾಲೆಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿ ವಿತರಣೆ

*ಹಗರಣ ಮಾಡಿದ್ದರೆ ಸಾರ್ವಜನಿಕವಾಗಿ ನನಗೆ ನೇಣು ಹಾಕಲಿ; ಸವಾಲು ಹಾಕಿದ ಸಚಿವ ಸುಧಾಕರ್*