Latest

ಅಸ್ತಿತ್ವ ಸಾಬೀತುಪಡಿಸದ 86 ರಾಜಕೀಯ ಪಕ್ಷಗಳು ಪಟ್ಟಿಯಿಂದಲೇ ಔಟ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಅಸ್ತಿತ್ವದಲ್ಲೇ ಇಲ್ಲ ಎಂದು ಕಂಡುಬಂದ 86 ರಾಜಕೀಯ ಪಕ್ಷಗಳನ್ನು ಭಾರತೀಯ ಚುನಾವಣಾ ಆಯೋಗ ಪಟ್ಟಿಯಿಂದಲೇ ತೆಗೆದುಹಾಕಿದೆ.

ಇದೇ ವೇಳೆ  253 ರಾಜಕೀಯ ಪಕ್ಷಗಳನ್ನು ‘ನಿಷ್ಕ್ರಿಯ’ ಎಂದು ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ್ ಹಾಗೂ ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಈ ಕ್ರಮ ಕೈಗೊಂಡಿದ್ದಾರೆ. ಈ ರಾಜಕೀಯ ಪಕ್ಷಗಳು ನೋಂದಣಿಯಾಗಿದ್ದರೂ ಗುರುತಿಸಲ್ಪಡದ ಪಕ್ಷಗಳಾಗಿದ್ದವು.

RP ಆ್ಯಕ್ಟ್ ನ ಕಲಂ 29A ಅಡಿ ಪ್ರತಿ ರಾಜಕೀಯ ಪಕ್ಷದ ಹೆಸರು, ಪ್ರಧಾನ ಕಚೇರಿ ವಿಳಾಸ, ಪದಾಧಿಕಾರಿಗಳ ವಿವರ, PAN ಇತ್ಯಾದಿ ವಿಳಂಬವಿಲ್ಲದೆ ನೀಡಲು ಆದೇಶಿಸಲಾಗಿತ್ತು. ಆದರೆ ಇದಕ್ಕೆ ಹಲವು ರಾಜಕೀಯ ಪಕ್ಷಗಳ ಸ್ಪಂದನೆ ಇರಲಿಲ್ಲ.

ನಂತರದಲ್ಲಿ ಈ ರಾಜಕೀಯ ಪಕ್ಷಗಳ ಭೌತಿಕ ಅಸ್ತಿತ್ವ ಅರಿಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಆಯಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಸಮೀಕ್ಷೆಗೆ ಆದೇಶಿಸಿತ್ತು. ಈ ವೇಳೆ ಈ ಪಕ್ಷಗಳ ಅಸ್ತಿತ್ವ ಕಂಡು ಬಂದಿರಲಿಲ್ಲ.

ಇದೀಗ ಪಟ್ಟಿಯಿಂದ ಹೊರಹಾಕಲ್ಪಟ್ಟ ಪಕ್ಷಗಳು 2014 ಹಾಗೂ 2019ರ ವಿಧಾನಸಭೆ ಹಾಗೂ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಸ್ಥಾನದಲ್ಲೂ ಸ್ಪರ್ಧಿಸಿರಲಿಲ್ಲ.

ಈ ಪಕ್ಷಗಳು ಚುನಾವಣಾ ಆಯೋಗ ನೀಡಿದ ಚಿಹ್ನೆಗಳನ್ನಾಧರಿಸಿ ಯಾವುದೇ ಪ್ರಯೋಜನ ಪಡೆಯದಂತೆ ಚುನಾವಣಾ ಆಯೋಗ ನಿರ್ಬಂಧನೆಗಳನ್ನು ವಿಧಿಸಿದೆ.

ಮಕ್ಕಳ ಕಳ್ಳರ ಜಾಲ ಎಂಬ ವದಂತಿ; ಇಬ್ಬರು ಶಂಕಿತರ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button