Latest

ಹೊಮಿಯೋಪಥಿಕ್ ಅಸೋಸಿಯೇಶನ್ ನ ಬೆಳಗಾವಿ ಘಟಕ ಅಸ್ಥಿತ್ವಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕ ಹೊಮಿಯೋಪಥಿಕ್ ಅಸೋಸಿಯೇಶನ್ ನ ಬೆಳಗಾವಿ ಘಟಕ ಅಸ್ಥಿತ್ವಕ್ಕೆ ಬಂದಿದೆ.
ರಾಜ್ಯಾಧ್ಯಕ್ಷ ಡಾ.ವೀರಬ್ರಹ್ಮಾಚಾರ್ಯ ಉಪಸ್ಥಿತಿಯಲ್ಲಿ ಬೆಳಗಾವಿ ಘಟಕ ಸ್ಥಾಪನೆಯಾಗಿದ್ದು, ಆಯುಷ್ ಇಲಾಖೆಯ ಮಾಜಿ ನಿರ್ದೇಶಕ ಡಾ.ಎ.ಎಲ್.ಪಾಟೀಲ ಸಹ ಇದ್ದರು. 
ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಉತ್ತೇಜಿಸುವುದು, ನಿರಂತರ ಅಧ್ಯಯನ ಕಾರ್ಯಕ್ರಮ ಸಂಘಟಿಸುವುದು, ಹೋಮಿಯೋಪಥಿ ವೈದ್ಯರನ್ನು ಸಂಘಟಿಸುವುದು ಈ ಸಂಘಟನೆಯ ಉದ್ದೇಶ.
 ಬೆಳಗಾವಿ ಘಟಕದ ಅಧ್ಯಕ್ಷರಾಗಿ ಡಾ.ಆರ್.ವೈ.ನದಾಫ್, ಉಪಾಧ್ಯಕ್ಷರಾಗಿ ಡಾ.ಎನ್.ಎಂ.ಪಾಟೀಲ ಮತ್ತು ಡಾ.ಸೋಮನಾಥ ಚಿಟ್ಟಿ, ಕಾರ್ಯದರ್ಶಿಯಾಗಿ ಡಾ.ಸೋನಾಲಿ ಸರ್ನೋಬತ್, ಜಂಟಿ ಕಾರ್ಯದರ್ಶಿಯಾಗಿ ಡಾ.ರಾಜಶೇಖರ ವಿರೂಪಾಕ್ಷಿ ಮತ್ತು ಡಾ.ಸಮೀರ್ ಸರ್ನೋಬತ್, ಖಜಾಂಚಿಯಾಗಿ ಡಾ.ಯೋಗೇಶ್ ದ್ರಾವಿಡ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಪ್ರಕಾಶ ಬಿದ್ರಿ, ಡಾ.ಸಂಜಯ, ಡಾ.ಸ್ಮಿತಾ ಬೆಟಗೇರಿ ಆಯ್ಕೆಯಾಗಿದ್ದಾರೆ. 

Related Articles

Back to top button