ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕನ್ನಡ ಮಾತನಾಡುವ ಎಲ್ಲಾ ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮವೊಂದನ್ನು ದಿವಾಕರ್ಸ್ ಸರ್ವಿಸ್ ಟ್ರಸ್ಟ್ ಸಹಯೊಗದೊಂದಿಗೆ ಮಹಿಳಾ ಆರೋಗ್ಯ ರಕ್ಷಣೆಯ ಕುರಿತು ಮಹಿಳಾ ಆರೋಗ್ಯ ಕ್ಷೇತ್ರದ ಮುಂಚೂಣಿ ವೈದ್ಯೆ ಡಾ ಹೇಮಾ ದಿವಾಕರ್ ಅವರ FIGO ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ.
ಅವಳಿಗಾಗಿ ಆರೋಗ್ಯ (ಹೆಲ್ತ್ ಫಾರ್ ಹರ್) ಎಂಬ ಶೀರ್ಷಿಕೆಯ ಕಾರ್ಯಕ್ರಮ ಸರಣಿ ಇದಾಗಿದ್ದು, ಸಂಭಾಷಣಾ ಶೈಲಿಯಲ್ಲಿ, ಪ್ರಶ್ನೋತ್ತರ ಮಾದರಿಯಲ್ಲಿ ಇರುತ್ತದೆ. ತನ್ಮೂಲಕ ಮಹಿಳೆಯರಲ್ಲಿರುವ ತಪ್ಪುಗ್ರಹಿಕೆಗಳನ್ನು ಮತ್ತು ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಲಾಗುತ್ತದೆ. ಆರೋಗ್ಯ ಸಮಸ್ಯೆ ತಡೆಗಟ್ಟಲು ಮತ್ತು ಸದೃಢ ಆರೋಗ್ಯಕ್ಕಾಗಿ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಯುವತಿಯರು ಮತ್ತು ಮಹಿಳೆಯರಿಗೆ ಸಂಪೂರ್ಣ ಜ್ಞಾನವನ್ನು ಒದಗಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ಮೈಲಿಗಲ್ಲಾಗಲಿದೆ.
ಈ ಭಾಗದಲ್ಲಿರುವ ರಾಷ್ಟ್ರಮಟ್ಟದ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು PCOS (ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್) ಸಮಸ್ಯೆಯ ಕುರಿತು ಕನ್ನಡದಲ್ಲಿ ಮಾತನಾಡುತ್ತಾರೆ. ಋತುಚಕ್ರಮದ ಸಮಸ್ಯೆ, ತಾಯಿಯ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಋತುಬಂಧದ ಆರೋಗ್ಯ ಸೇರಿದಂತೆ ಸಾಮಾನ್ಯ ಕಾಯಿಲೆ ಮತ್ತು ಇನ್ನೂ ಬೇರೆ ಬೇರೆ ವಿಷಯಗಳನ್ನು ಮುಂದಿನ ಕಾರ್ಯಕ್ರಮಗಳಲ್ಲಿ ತಿಳಿಸಿಕೊಡಲಾಗುವುದು. ಕನ್ನಡದಲ್ಲಿ ಮಾತ್ರವಲ್ಲದೆ ಇತರ ಹೆಚ್ಚಿನ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದು.
ಪ್ರೇರಕ ಸಂಸ್ಥೆ ARTIST FOR HER ನಿಂದ ನಿರ್ವಹಿಸಲ್ಪಡುವ ಪ್ರಯತ್ನ ಇದಾಗಿದ್ದು, ಡಾಕ್ಸ್‌ಪೇಸ್ ಸಹಯೋಗ ಒದಗಿಸಲಿದೆ. ಫೇಸ್ ಬುಕ್ ಲೈವ್, ಯು ಟ್ಯೂಬ್ ಮೊದಲಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಇದು ಲಭ್ಯವಿರುತ್ತದೆ. ಲೈವ್ ಕಾರ್ಯಕ್ರಗಳಲ್ಲಿ ಕೇಳಲು ಸಾಧ್ಯವಾಗದವರು ನಂತರದಲ್ಲಿ ಕೂಡ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಡಾ.ಹೇಮ ದಿವಾಕರ್ ಮಾಹಿತಿ ನೀಡಿದ್ದಾರೆ.
ಒಂದೇ ಒಂದು ಫೋನ್ ಕಾಲ್ ನಲ್ಲಿ ಹೆಚ್ಚಿನ ವೈದ್ಯರನ್ನು ಸಂಪರ್ಕಿಸಲು ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ನಿಂದ HealthforHer ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ಡೌನ್‌ಲೋಡ್ ಮಾಡಿ https://play.google.com/store/apps/
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ಮೊಬೈಲ್: 9844046724 | ಇಮೇಲ್: [email protected]
ಡಾ.ಹೇಮಾ ದಿವಾಕರ್
ಸಲಹೆಗಾರರು, ObGyn ಮತ್ತು ವೈದ್ಯಕೀಯ ನಿರ್ದೇಶಕರು, ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು.
ಅಧ್ಯಕ್ಷರು, FOGSI 2013, ಆರ್ಗನೈಸಿಂಗ್ ಚೇರಮನ್ AICOG 2019,
CEO – ARTIST FOR HER (ಕೌಶಲ್ಯ ವರ್ಗಾವಣೆಗಾಗಿ ಏಷ್ಯನ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆ),
FOGSI Ambassador of FIGIO (ಅಂತರರಾಷ್ಟ್ರೀಯಸ್ತ್ರೀರೋಗತಜ್ಞರು ಮತ್ತು ಪ್ರಸೂತಿ ತಜ್ಞರ ಒಕ್ಕೂಟ).
ಬೆಳಗಾವಿಯ ಇಬ್ಬರು ಯುವತಿಯರು ನಾಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ