
ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಒಂದೆಡೆ ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರೆ, ಮತ್ತೊಂದಡೆ ನಕಲಿ ಎಸಿಬಿ ಅಧಿಕಾರಿಗಳ ಜಾಲ ಹಲವರ ನಿದ್ದೆಗೆಡಿಸಿದೆ.
ಬಾಗಲಕೋಟೆ ಎಸಿಬಿ ಡಿವೈ ಎಸ್ ಪಿ ಸುರೇಶ್ ರೆಡ್ಡಿ ಹಾಗೂ ವಿವಿಧ ಎಸಿಬಿ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿರುವ ಗ್ಯಾಂಗ್, ನಾವು ಎಸಿಬಿ ಅಧಿಕಾರಿಗಳು ಹಣ ಸೆಟಲ್ ಮಾಡದಿದ್ದರೆ ನಿಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸುವುದಾಗಿ ಹೇಳಿ ಎಇಇಗೆ ಬೆದರಿಕೆಯೊಡ್ದಿದ ಘಟನೆ ನಡೆದಿದೆ.
ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಈಶ್ವರ ಕುರಬಗಟ್ಟಿ ಗೆ ಇಂತದ್ದೊಂದು ಕರೆ ಬಂದಿದ್ದಾಗಿ ತಿಳಿಸಿದ್ದಾರೆ. ಟ್ರೂ ಕಾಲರ್ ನಲ್ಲಿ ಎಸಿಬಿ ಡಿವೈ ಎಸ್ ಪಿ ಎಂದು ಗೋಚರವಾಗಿದ್ದು, ಅನುಮಾನಗೊಂಡು ಈಶ್ವರ ಕುರಬಗಟ್ಟಿ ಬಾಗಲಕೋಟೆ ಸಿಇ ಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಂಚಕರು ಹಲವು ಅಧಿಕಾರಿಗಳಿಗೆ ಇದೇ ರೀತಿ ಎಸಿಬಿ ಹೆಸರಲ್ಲಿ ಕರೆ ಮಾಡಿ ಬೆದರಿಕೆಯೊಡ್ದಿ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ನಕಲಿ ಎಸಿಬಿ ಗ್ಯಾಂಗ್ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಈ ನಡುವೆ ರಾಯಚೂರಿನ ಸರ್ಕಾರಿ ಅಧಿಕಾರಿಗಳಿಗೂ ನಕಲಿ ಎಸಿಬಿ ತಂಡದಿಂದ ಕರೆ ಬಂದಿದ್ದು, ಅಧಿಕಾರಿ ಹನುಮಂತ ಎಂಬುವವರ ಜತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಮೂವರು ಐಎಎಸ್ ಅಧಿಕಾರಿಗಳಿಗೆ ಜೈಲುಶಿಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ