ಪ್ರಗತಿವಾಹಿನಿ ಸುದ್ದಿ, ಹಂದಿಗುಂದ :- ಕೇಂದ್ರ ಹಾಗೂ ರಾಜ್ಯ ಸರಕಾರ ರೈತ ವಿರೋಧಿ ಕಾಯ್ದೆ ತರುವ ಮೂಲಕ ರೈತರಿಗೆ ಇದು ವರವಾಗದೆ ಮರಣ ಶಾಸನ ಬರೆದಂತಾಗಿದೆ. ಭೂಸುಧಾರಣಾ ಕಾಯ್ದೆಯನ್ನು ಕೂಡಲೇ ಕೈಬಿಡಬೇಕೆಂದು ರಾಯಬಾಗ ತಾಲೂಕಾ ರೈತಸಂಘ ಹಾಗೂ ಹಸಿರುಸೇನೆ ತಾಲೂಕಾ ಅಧ್ಯಕ್ಷ ಮಲ್ಲಪ್ಪ ಅಂಗಡಿ ಹೇಳಿದರು.
ಅವರು ಹಾರೂಗೇರಿ ಕ್ರಾಸ್‌ನಲ್ಲಿ ರಾಯಬಾಗ ತಾಲೂಕಾ ರೈತಸಂಘ ಹಾಗೂ ಹಸಿರುಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಜಮಖಂಡಿ -ಮೀರಜ ರಾಜ್ಯ ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಮಾತನಾಡಿದರು.
ರೈತ ಸಂಘಟಣೆ ಹಿರಿಯ ಮುಖಂಡ ಕಲ್ಲನಗೌಡ ಪಾಟೀಲ ಮಾತನಾಡಿ, ರೈತರು ಸಾಲ ಮಾಡಿ ಭೂಮಿಯನ್ನು ನಂಬಿ ತಮ್ಮ ಬದುಕನ್ನು ಸಾಗಿಸುತ್ತಿದಾರೆ. ರೈತರ ಜಮೀನನ್ನು ರೈತರು ಮಾತ್ರ ಖರೀದಿಸಬೇಕು, ಅಂತಾ ನಿಯಮ ಇದ್ದರೂ ಉದ್ದಿಮೆದಾರರಿಗೆ ಅವಕಾಶ ನೀಡಬಾರದು. ರೈತರ ಮನವಿಯವನ್ನು ಅವಲೋಕಿಸಿ ಕಾಯ್ದೆಯನ್ನು ಜಾರಿ ತರಬಾರದು ಎಂದು ಮನವಿ ಮಾಡಿಕೊಂಡರು.
ರಾಯಬಾಗ ತಾಲೂಕಾ ರೈತ ಸಂಘದ ಮುಖಂಡ ಅಣ್ಣಪ್ಪ ಹಳ್ಳೂರು ಮಾತನಾಡಿ ರಾಜ್ಯ ಸರ್ಕಾರ ರೈತರಿಗೆ ಉಪಯೋಗವಾಗುವ ವಿದ್ಯುತ್, ಎ.ಪಿ.ಎಮ್.ಸಿ. ಖಾಸಗಿಕರಣ ಮಾಡಲು ತಿರ್ಮಾನಿಸಿದ್ದು ಅವುಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಗೊಳಿಸಿಬಾರದು ಎಂದು ಮನವಿ ಮಾಡಿಕೊಂಡರು . ನಂತರ ರೈತ ಸಂಘಟನೆಯ ವಿವಿಧ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ಕುಡಚಿ ಉಪತಹಶಿಲ್ದಾರ ಆಯ್. ಕೆ. ಹಿರೇಮಠ ಹಾಗೂ ಕಂದಾಯ ನಿರೀಕ್ಷಕ ರಾಜು ದಾನೋಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಹಾರೂಗೇರಿ ಠಾಣಾಧಿಕಾರಿ ಯಮನಪ್ಪಾ ಮಾಂಗ, ಕ್ರೈಮ್ ಪಿ.ಎಸ್.ಐ. ಆರ್.ಆರ್.ಕಂಗನೊಳ್ಳಿ ಸೂಕ್ತ ಪೋಲೀಸ್ ಸಿಬ್ಬಂದಿಯಿಂದ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ರಾಯಬಾಗ ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಮಲ್ಲಪ್ಪ ಅಂಗಡಿ, ಬೆಳಗಾವಿ ಜಿಲ್ಲಾ ಮುಖಂಡ ಕಲ್ಲಣಗೌಡ ಪಾಟೀಲ, ಶಿವಾನಂದ ಚೌಗಲಾ, ಶಂಕರ ದೇಸಾಯಿ, ರಮೇಶ ಕಲ್ಲಾರ, ಕಾಶಿರಾಯಿ ಕಲ್ಯಾಣಿ, ಗಿರಿಮಲ್ಲ ಕಲ್ಲಾರ, ಅಣ್ಣಪ್ಪ ಹಳ್ಳೂರ, ಮಾಯಪ್ಪ ಲೋಕುರ, ಯಲ್ಲಾಲಿಂಗ ಸಸಾಲಟ್ಟಿ, ಲಕ್ಷ್ಮಣ ತೂಕ್ಕಾನಟ್ಟಿ, ಮಹೇಶ ಯಲ್ಲಟ್ಟಿ, ಮಾರುತಿ ಬಳ್ಳಿಗಾರ, ಶಿವಾನಂದ ಗುಣಕಿ, ಮಲ್ಲಪ್ಪ ಮಿರ್ಜಿ, ರಮೇಶ ತೇಲಿ, ನಾಗಪ್ಪ ಅಂದಾನಿ, ಸೇರಿದಂತೆ ವಿವಿಧ ಹಳ್ಳಿಗಳಿಂದ ರೈತ ಮುಖಂಡರು ಪಾಲ್ಗೋಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ