ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ವಿಟ್ ಇಂಡಿಯಾ ಚಳವಳಿ ನೆನಪಿನ ದಿನ ದಸ್ಮರಣಾರ್ಥ ಬೆಳಗಾವಿಯ ಸ್ವಾತಂತ್ರ್ಯ ಸೈನಿಕ ಭವನದಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಗಾರ, ಬೆಳಗಾವಿಯ ಸ್ವಾತಂತ್ರ್ಯ ಸೈನಿಕ ಭವನದ ಅಧ್ಯಕ್ಷ ರಾಜೇಂದ್ರ ಕಲಘಟಗಿ ಅವರನ್ನು ಸನ್ಮಾನಿಸಲಾಯಿತು.
99 ವರ್ಷದ 9 ತಿಂಗಳ ವಯಸ್ಸಿನ ಕಲಘಟಗಿ ಚಿಕ್ಕವಯಸ್ಸಿನಲ್ಲೇ ಬಿಟಿಷರ ವಿರುದ್ಧ ಹೋರಾಟ ಮಾಡಿದವರು. ಜುಲೈ 9 ಕ್ವಿಟ್ ಇಂಡಿಯಾ ಚಳವಳಿ ದಿನದಂದು ಅವರಿಗೆ ಸರ್ಕಾರದಿಂದ ಸತ್ಕಾರ ಏರ್ಪಡಿಸಲಾಗಿತ್ತು.
ಈ ಸಭೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಅಧ್ಯಕ್ಷ ಸ್ಥಾನ ವಹಿಸಿದ್ದರು. ರಾಜೇಂದ್ರ ಕಲಘಟಗಿ ಅವರಂತಹವರ ಹೋರಾಟದಿಂದಾಗಿ ನಮಗೆ ಸ್ವಾತಂತ್ರ್ಯ ಬಂದಿದೆ. ಅತವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಕಾರ್ಯಕ್ರಮಕ್ಕೆ ಶುಭ ಕೋರಿ ಸಂದೇಶ ಕಳಿಸಿದ್ದಾರೆ. ರಾಜೇಂದ್ರ ಕಲಘಟಗಿ ಅವರು ದೀರ್ಘಕಾಲ ಬದುಕಲಿ ಎಂದು ಹಾರೈಸಿದ್ದಾರೆ ಎಂದು ಶಂಕರಗೌಡ ಪಾಟೀಲ ಹೇಳಿದರು.
ಅತಿಥಿಗಳಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ, ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅರುಣ್ ಚಿವತೆ, ಸ್ವಾತಂತ್ರ್ಯ ಸೈನಿಕ ಭವನದ ಉಪಾಧ್ಯಕ್ಷರು, ಪರಶುರಾಮ್ ನಂದಿಹಳ್ಳಿ, ಸಂಜಯ್ ಪಾಟೀಲ್ ಜಯಂಟ್ಸ್ ಗ್ರೂಪ್ ಆಫ್ ಬೆಳಗಾವಿ ಹಾಗೂ ಇತರೆ ಸ್ವಾತಂತ್ರ್ಯಯೋಧರು ಹಾಗೂ ನಾಗರಿಕರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ