Latest

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಸಿನೆಮಾ ಸ್ಟಾರ್ ಗಳ ಶುಭಾಶಯದ ಸುರಿಮಳೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯದ ಸುರಿಮಳೆ ಸುರಿಸಿದ್ದಾರೆ.

ನಟ ಅನಿಲ್ ಕಪೂರ್ ಟ್ವೀಟ್ ಮಾಡಿ “ಭಾರತವನ್ನು ವಿಶ್ವ ಭೂಪಟದಲ್ಲಿ ಇರಿಸಿದ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು.. ಅಚ್ಛೇ ದಿನ್‌ನ ಮುನ್ನುಡಿ” ಎಂದು ಬರೆದಿದ್ದಾರೆ.

ನಟಿ ಕಂಗನಾ ರಾಣಾವತ್  “ಬಾಲ್ಯದಲ್ಲಿ ಚಹಾ ಮಾರುವುದರಿಂದ ಹಿಡಿದು ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗುವವರೆಗೆ ಬೆಳೆದ ನಿಮ್ಮ ಪರಂಪರೆಯನ್ನು ಯಾರೂ ಅಳಿಸಲು ಸಾಧ್ಯವಿಲ್ಲ.” ಎಂದಿದ್ದಾರೆ.

ನಟ ಅಕ್ಷಯ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕುಳಿತ ಚಿತ್ರ ಹಂಚಿಕೊಂಡಿದ್ದು  “ನಿಮ್ಮ ದೃಷ್ಟಿ, ನಿಮ್ಮ ಧಾರ್ಷ್ಟ್ಯ ಮತ್ತು ಕೆಲಸ ಮಾಡುವ ನಿಮ್ಮ ಸಾಮರ್ಥ್ಯಗಳು  ನಾನು ಸ್ಫೂರ್ತಿದಾಯಕವೆಂದು ಆಳವಾಗಿ ಭಾವಿಸುವ ವಿಷಯಗಳು. ಜನ್ಮದಿನದ ಶುಭಾಶಯಗಳು @narendramodi ಜೀ.  ನಿಮಗೆ ಉತ್ತಮ ಆರೋಗ್ಯ ಲಭಿಸಲಿ” ಎಂದು ಹಾರೈಸಿದ್ದಾರೆ.

Home add -Advt

ಬಾಲಿವುಡ್ ತಾರೆಯರಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಅನುಪಮ್ ಖೇರ್, ಅಭಿಷೇಕ್ ಬಚ್ಚನ್, ಇಶಾ ಕೊಪ್ಪಿಕರ್, ಆಲಿಯಾ ಭಟ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ಸಂಗೀತ ನಿರ್ದೇಶಕ ಶಂಕರ ಮಹಾದೇವನ್,  ದಕ್ಷಿಣದ ಸ್ಟಾರ್ ಗಳಾದ ಮಹೇಶಬಾಬು, ಮಮ್ಮುಟ್ಟಿ, ಪವನ್ ಕಲ್ಯಾಣ್ ಸೇರಿದಂತೆ ಹಲವಾರು ನಟರು, ನಿರ್ಮಾಪಕರು, ನಿರ್ದೇಶಕರು ಮೋದಿಯವರಿಗೆ ಜನ್ಮದಿನದ ಶುಭ ಹಾರೈಸಿದ್ದಾರೆ.

ಸಿಎಂ ಭೇಟಿಯಾದ ಕೇರಳ ಸಿಎಂ ಪಿಣರಾಯಿ ವಿಜಯನ್; ಅವರ ಯೋಜನೆಗಳ ಪ್ರಸ್ತಾಪ ತಿರಸ್ಕರಿಸಿದ್ದೇವೆ ಎಂದ ಸಿಎಂ ಬೊಮ್ಮಾಯಿ

 

Related Articles

Back to top button