Latest

ಸಿಡಿ ಲೇಡಿಯಿಂದ 5ನೇ ವಿಡಿಯೋ ಬಾಂಬ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ ನಮ್ಮ ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ. ಅವರ ಮೇಲೆ ಒತ್ತಡ ಹಾಕಿ ಪ್ರಭಾವ ಬೀರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದಿದ್ದಾರೆ.

ಅನ್ಯಾಯವಾಗಿರುವುದು ನನಗೆ. ನ್ಯಾಯ ಸಿಗಬೇಕಿರುವುದು ನನಗೆ. ಏನಾಗಿದೆ ಎಂಬುದು ಗೊತ್ತೇ ಇರದ ಅಪ್ಪ-ಅಮ್ಮನನ್ನು ಕರೆದು ಪ್ರಭಾವ ಬೀರಿ, ಬ್ಲ್ಯಾಕ್ ಮೇಲ್ ಮಾಡಿ ಅವರ ಬಾಯಿಂದ ಏನೇನೋ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದರಿಂದ ನನಗೆ ಹೊರಬಂದು ಹೇಳಿಕೆಗಳನ್ನು ನೀಡಲು ಭಯವಾಗುತ್ತಿದೆ. ಇಷ್ಟೊಂದು ಪ್ರಭಾವ ಬೀರುತ್ತಾ ಪ್ಲೇಟ್ ಚೇಂಜ್ ಮಾಡುತ್ತಿರುವ ಇವರಿಂದ ನಾಳೆ ನಾನು ಅಲ್ಲಿ ಬಂದು ಹೇಳಿಕೆ ನಿಡಲು ಹೋದರೂ ಏನಾಗುತ್ತೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಳಲು ತೊಡಿಕೊಂಡಿದ್ದಾಳೆ.

Home add -Advt

ನನಗಾಗಿರುವ ಅನ್ಯಾಯದ ಬಗ್ಗೆ ಎಳೆ ಎಳೆಯಾಗಿ ಎಲ್ಲರ ಮುಂದೆ ಬಿಚ್ಚಿಡುತ್ತೇನೆ. ನಾನು ನಿಮ್ಮೆಲ್ಲರ ಮುಂದೆ ಕೇಳಿಕೊಳ್ಳುವುದು ಇಷ್ಟೇ. ಇಂದಿನ ಬೆಳವಣಿಗೆಯಿಂದ ನನಗೆ ಭಯವಾಗಿದೆ. ಹಾಗಾಗಿ ನಾನು ಎಲ್ಲರ ಬಳಿ ಕೇಳಿಕೊಳ್ಳುವುದು ಇಷ್ಟೇ ಸಿಎಂ ಯಡಿಯೂರಪ್ಪ, ಗೃಹ ಸಚಿವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಲ್ಲಾ ಮುಖಂಡರು, ಸಂಘಟನೆಗಳ ಬಳಿ ಮನವಿ ಮಾಡುತ್ತೇನೆ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಲು ನನಗೆ ಸಹಾಯಮಾಡಿ ಎಂದು ಮನವಿ ಮಾಡಿದ್ದಾಳೆ.

ನನಗೆ ಆ ಯುವತಿ ಪರಿಚಯವಿಲ್ಲ, ಅದು ಅವರ ಪರ್ಸ್ನಲ್ ಪ್ರಾಬ್ಲಂ, ಅವರೇ ಬಗೆಹರಿಸಿಕೊಳ್ಳಲಿ – ಡಿ.ಕೆ.ಶಿವಕುಮಾರ

ಡಿಕೆಶಿ ನಮ್ಮ ಮಗಳನ್ನು ಒತ್ತೆಯಾಳು ಮಾಡಿದ್ದಾರೆ: ಯುವತಿಯ ಪೋಷಕರ ಗಂಭೀರ ಆರೋಪ

Related Articles

Back to top button