Latest

400 ಸಿಡಿ: ಸಿಡಿ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಎರಡು ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿದೆ. ಇನ್ನೊಂದು ಕಾಂಗ್ರೆಸ್ ನಲ್ಲಿದೆ. ರಮೇಶ್ ಜಾರಕಿಹೊಳಿ ಸಿಡಿ ರೀತಿಯೇ ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಡಿ ತಯಾರಿಸುವ ದೊಡ್ಡ ಗ್ಯಾಂಗ್ ಇದೆ. ಗ್ಯಾಂಗ್ ಕಟ್ಟಿಕೊಂಡು ಮೊದಲು ಶಾಸಕರು, ಸಚಿವರ ಜೊತೆ ಸಲುಗೆ ಬೆಳಸಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ತಯರೈಸಿ ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಾರೆ.  ಹುಬ್ಬಳ್ಳಿಯಲ್ಲಿಯೂ ಕೆಲವರಿಗೆ ಹೀಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಸಿಡಿ ಇಟ್ಕೊಂಡು ಹಲವರ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಹಲವರು ಮಾನಮರ್ಯಾದೆಗೆ ಅಂಜಿ ಹಣ ಕೊಟ್ಟು, ಕಾಲು ಹಿಡಿದು ಸಿಡಿ ಬಿಡುಗಡೆ ಮಾಡದಂತೆ ಕೇಳಿಕೊಂಡಿದ್ದಾರೆ ಬಾಗಲಕೋಟೆ ಜಿಲ್ಲೆಯಲ್ಲಿ. ಕಾಲು ಹಿಡಿದರೂ ಕೂಡ ಆತ ಮಾತ್ರ ಸಿಡಿ ಬಿಡುಗಡೆ ಮಾಡಿದ್ದಾನೆ.

ಜಾರಕಿಹೊಳಿ ಕೇಸನ್ನು ಸಿಬಿಐ ಗೆ ವಹಿಸಬೇಕು. ಅಂದಾಗ ಮಾತ್ರ ಪ್ರಕರಣ ಅಂತ್ಯಕಾಣಲಿದೆ. ಎಸ್ ಐಟಿ ತಂಡ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಅಧೀನದಲ್ಲಿದೆ. ತನಿಖಾಧಿಕಾರಿಗಳೂ ಅವರು ಹೇಳಿದಂತೆ ಕೇಳಬೇಕು ಹಾಗಾಗಿ ಯಾರನ್ನು ಬೇಕಾದರೂ ಸಿಕ್ಕಿಸಿ ಹಾಕ್ತಾರೆ. ಡ್ರಗ್ಸ್ ಕೇಸ್ ಕೂಡ ಇದೇ ರೀತಿ ಆಗಿದೆ ಎಂದು ಹೇಳಿದರು.

ಇದೇ ವೇಳೆ ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ಕೂಡ ಒಂದು ಗ್ಯಾಂಗ್ ಇದೆ. ಒಂದು ಸಾರಿ ಭೇಟಿಗೆ 25 ಲಕ್ಷ 1 ಕೋಟಿ ಕೇಳ್ತಾರೆ. ಓರ್ವ ರಾಜ್ಯಸಭಾ ಸದಸ್ಯರು ಯುವರಾಜನಿಗೆ 10 ಕೋಟಿ ನೀಡಿದ್ದರು. ಈಗ ಎಲ್ಲವೂ ಬಿಸಿನೆಸ್ ಆಗಿಬಿಟ್ಟಿದೆ ಎಂದು ಯತ್ನಾಳ್ ಹೇಳಿದ್ದಾರೆ.

Home add -Advt

Related Articles

Back to top button