Latest

ನಕಲಿ ನೋಟು ತಯಾರಿಕೆ, ಚಲಾವಣೆ: ಮುರಗೋಡಲ್ಲಿ 7 ಬಂಧನ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

2000 ರೂ, ಮತ್ತು 200 ರೂ. ನೋಟುಗಳನ್ನು ಕಲರ್ ಜರಾಕ್ಸ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಸವದತ್ತಿ ತಾಲೂಕು ಮುರಗೋಡ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.

ಶಿವಾನಂದ ಶಂಕರಪ್ಪ ಕಾಶಪ್ಪನವರ್, ಷರೀಫ್ ಗುಡ್ಡುಸಾಬ್ ಸಾಬರ್, ಪ್ರವೀಣ ಶಿವಲಿಂಗಪ್ಪ ಸರದಾರ, ಮೀರಾಸಾಬ್ ಕುತುಬ್ ಸಾಬ್ ಮುಲ್ಲಾ, ಚೇತನ್ ವೀರಣ್ಣ ಗೌಡರ್, ಕುಮಾರ ಈರಣ್ಣ ಅಂಗಡಿ, ಜಿಯಾವಲ್ಲಾ ಗುಡುಸಾಬ್ ಚಪಾತಿ ಬಂಧಿತರು. 

ಚೇತನ್ ಮತ್ತು ಕುಮಾರ ಎನ್ನುವವರು ಕಿರಾಣಿ ಅಂಗಡಿಯೊಂದರಲ್ಲಿ ಕಲರ್ ಜರಾಕ್ಸ್ ಮಾಡಿದ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸಂಪೂರ್ಣ ಜಾಲ ಬಯಲಾಗಿದೆ. ಕಲರ್ ಜರಾಕ್ಸ್ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. 

ತನಿಖೆ ಮುಂದುವರಿದಿದೆ ಎಂದು ಎಸ್ಪಿ ಸುಧೀರ ರಡ್ಡಿ ತಿಳಿಸಿದ್ದಾರೆ.

 

Related Articles

Back to top button