ಪಿಎಂ ಸ್ವನಿಧಿ ಯೋಜನೆಯ ಲಾಭ ಇನ್ನಷ್ಟು ವಿಸ್ತರಣೆ – ರಾಮದಾಸ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗೊಳಿಸುವ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆ ರೂಪಿಸಲಾಗಿದ್ದು, ಈಗ ಪತ್ರಿಕೆ ಹಂಚುವ, ಹಾಲು ಮಾರುವ ಮುಂತಾದ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗಲಿದೆ ಎಂದು ಮಾಜಿ ಸಚಿವ ಹಾಗೂ ಪಿಎಂ ಸ್ವನಿಧಿ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ ಹೇಳಿದರು.
ಅವರು ಬುಧವಾರ ತಾಲೂಕಿನ ಯಕ್ಸಂಬಾ ಬೀರೇಶ್ವರ ಸಭಾ ಭವನದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನಗರ, ಪಟ್ಡಣ ಪಂಚಾಯತಿ ಸದಸ್ಯರಿಗೆ ಹಮ್ಮಿಕೊಂಡ ಪ್ರಧಾನಮಂತ್ರಿ ಸ್ವನಿಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಸಾಲವಾಗಿ ೧೦ ಸಾವಿರ ರೂಪಾಯಿ, ಎರಡನೇ ಸಾಲವಾಗಿ ೨೦ ಸಾವಿರ ರೂಪಾಯಿ ಹಾಗೂ ಮೂರನೇ ಸಾಲವಾಗಿ ೫೦,೦೦೦ ರೂ.ವರೆಗೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ ಕುರಿತು ಹೆಚ್ಚು ಹೆಚ್ಚು ಪ್ರಚಾರ ಮಾಡಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕೆಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯಧನ ಕೊಡುವ ಯೋಜನೆಯು ದೇಶದ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಮಾಹಿತಿ ಒದಗಿಸುವ ಈ ಕಾರ್ಯಕ್ರಮ ಉದ್ದೇಶವಾಗಿದೆ. ಸರಕಾರದ ಯೋಜನೆ ಜನರ ಮನೆ ಬಾಗಿಲಗಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ. ದೇಶದ ಸುರಕ್ಷಿತರ ಬಗ್ಗೆ ಕಾಯ್ದೆ ಜಾರಿ ಮಾಡಿರುವುದು ಪ್ರಧಾನಿ ಮೋದಿ ಅವರದಾಗಿದೆ. ಉಚಿತ ಗ್ಯಾಸ ಕೊಡುವ ಮೂಲಕ ಹೆಣ್ಣುಮಕ್ಕಳ ಕಣ್ಣಿರು ಒರೆಸಿದ್ದಾರೆ. ಆಯು?ನ ಭಾರತ ಯೋಜನೆ ಜಾರಿ ಮಾಡಿ ಕೋಟ್ಯಾಂತರ ಬಡವರಿಗೆ ಅನುಕೂಲ ಕಲ್ಪಿಸಿದ್ದಾ ರೆ. ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಉಪಯೋಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ. ಪವನ ಪಾಟೀಲ. ರಮೇಶ ಕೇತಗೌಡರ.ಪ್ರಣವ ಮಾನ್ವಿ. ಶ್ರೀಶೈಲ ಯಮಕನಮರಡಿ.ರವಿ ಹಂಜಿ. ಸತೀಶ ಅಪ್ಪಾಜಿಗೋಳ. ಸಂಜಯ ಪಾಟೀಲ. ದೀಪಕ ಪಾಟೀಲ ಇದ್ದರು.
ಡಾ.ರಾಜೇಶ ನೇರ್ಲಿ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ