Karnataka News

*20 ಸಾವಿರಕ್ಕೆ ಕೈಯೊಡ್ದಿದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ; ಕಲಬುರಗಿ ಜಿಲ್ಲೆಯ ಮೇಳಕುಂದ ಗ್ರಾಮದ ಆಡಳಿತಾಧಿಕಾರಿ ಹಾಗೂ ಗ್ರಾಮ ಸೇವಕ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ವಿಎ ಕಾಂತೇಶ್ ಹಾಗೂ ಗ್ರಾಮ ಸೇವಕ ಅಖ್ತರ್ ಪಟೇಲ್ ಲೋಕಾಯುಕ್ತ ಬಲೆಗೆ ಬಿದ್ದವರು. ಸಿದ್ದರಾಮಯ್ಯ ಹಿರೇಮಠ ಎಂಬುವವರಿದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 20 ಸಾವಿರ ಹಣ ಪಡೆಯುತ್ತಿದ್ದಾಗ ಕಲಬುರಗಿ ಲೋಕಾಯುಕ್ತ ಎಸ್ ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಕಾಂತೇಶ್ ಹಾಗೂ ಅಕ್ತರ್ ಪಟೇಲ್ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

Related Articles

Back to top button