Cancer Hospital 2
Beereshwara 36
LaxmiTai 5

ಜೂನ್ 2 ರಂದು ವಧು- ವರರ ಸಮಾವೇಶ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ಗುರು ಶಾಂತೇಶ್ವರ ವಧು ವರ ಮಾಹಿತಿ ಕೇಂದ್ರ, ಹುಕ್ಕೇರಿ ಇವರಿಂದ ಬೆಳಗಾವಿಯ ಲಕ್ಷ್ಮಿ ಟೇಕಡಿಯಲ್ಲಿರುವ ಹಿರೇಮಠದಲ್ಲಿ ಜೂ.2 ರಂದು ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳಪಂಗಡಗಳ ವಧುವರರ 18ನೇ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಧುವರ ಮಾಹಿತಿ ಕೇಂದ್ರದ ಅಧ್ಯಕ್ಷ ಶಿವಾನಂದ ಜಿರಲಿ ತಿಳಿಸಿದ್ದಾರೆ.‌

ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಾರಂಜೀಮಠದ  ಶ್ರೀ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಮಹಾಂತೇಶ ಹಿರೇಮಠ ವಹಿಸಲಿದ್ದಾರೆ. ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷೆ ರತ್ನ ಪ್ರಭಾ ಬೆಲ್ಲದ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವ್ಹಿ.ಜಿ. ನೇರಲಗಿಮಠ, ದಿಲೀಪ ಕುರಂದವಾಡೆ, ಶಿವನಗೌಡ (ಗುಂಡು) ಪಾಟೀಲ ಆಗಮಿಸಲಿದ್ದಾರೆ.  

Emergency Service

ವೀರಶೈವ ಲಿಂಗಾಯತ ಸಮಾಜದ  ವಧು-ವರರು, ವಿದುರ- ವಿಧವೆಯರು ವಿಚ್ಚೇದಿತರು ಈ ಸಮಾವೇಶದಲ್ಲಿ ತಮ್ಮ ಇತ್ತೀಚಿನ ಫೋಟೋ ಮತ್ತು ಬಯೋಡಾಟಾಗಳೊಂದಿಗೆ ಹಾಜರಿರಲು ಶ್ರೀ ಗುರುಶಾಂತೇಶ್ವರ ವಧುವರ ಮಾಹಿತಿ ಕೇಂದ್ರದ ಪ್ರಕಟಣೆ ತಿಳಿಸಿದೆ.  ಹೆಚ್ಚಿನ ಮಾಹಿತಿಗಾಗಿ 8660057488 ಸಂಪರ್ಕಿಸಬಹುದು.

Bottom Add3
Bottom Ad 2