Kannada NewsKarnataka News

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದೇ ಕುಟುಂಬದ ಮೂವರು 

ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಹೊಸಲಿಂಗಪುರದಲ್ಲಿ ನಡೆದಿದೆ.

ರಾಜೇಶ್ವರಿ (50), ಮಗಳಾದ ವಸಂತ (28), ಮೊಮ್ಮಗ ಸಾಯಿ ಧರ್ಮತೇಜ (5) ಸಾವನ್ನಪ್ಪಿದ್ದಾರೆ. ವಸಂತ ಮೃತದೇಹ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ ಹಾಗೂ ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ರೂಮ್‌ನಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

Home add -Advt

ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಸಂತಳಿಗೆ ಆಂದ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಆದ್ರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತ, ತವರು ಮನೆಯಲ್ಲಿ ಇದ್ದಳು ಅಲ್ಲದೆ. ಹೊಸ‌‌ ಲಿಂಗಾಪುರ ಬಳಿ ಬೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ವಸಂತಗೆ ಬೇರೊಬ್ಬರ ಜೊತೆಗೆ ಸಂಪರ್ಕ ಇತ್ತು ಎಂದು ಹೇಳಲಾಗಿದೆ. 

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಈ ಬೀದಿಯಲ್ಲಿರುವ ಅಂಗಡಿಗಳ ಮುಂದಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Back to top button