ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಗುಜರಾತ್‌ನ ಮೋರ್ಬಿಯಲ್ಲಿ ಕಳೆದ ಭಾನುವಾರ ನಡೆದ ತೂಗುಸೇತುವೆ ದುರಂತದ ಆರೋಪಿಗಳಲ್ಲಿ ಒಬ್ಬನಾದ ಒರೆವಾ ಕಂಪನಿಯ ಮ್ಯಾನೇಜರ್ ದೀಪಕ್ ಪರೇಖ್ ನ್ಯಾಯಾಲಯದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
ಮೋರ್ಬಿಯಲ್ಲಿ ತೂಗುಸೇತುವೆ ಮುರಿದು 130 ಜನ ಮೃತಪಟ್ಟಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಸೇತುವೆಯ ನಿರ್ವಹಣೆ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯ 9 ಜನರ ಮೇಲೆ ಪ್ರಕರಣ ದಾಖಲಿಸಿದ್ದು ಈ ಪೈಕಿ ಕೆಲವರನ್ನು ಈಗಾಗಲೇ ಬಂಧಿಸಿದೆ.
ಬಂಧಿತರ ಪೈಕಿ ಒರೆವಾದ ಮ್ಯಾನೇಜರ್ ದೀಪಕ್ ಪರೇಖ್, ನ್ಯಾಯಾಲಯದಲ್ಲಿ, ಈ ದುರಂತ ನಡೆದಿದ್ದು ದೇವರ ಇಚ್ಛೆ ಎಂದಿದ್ದಾನೆ. ಆ ಮೂಲಕ ಆರೋಪಿ ಸಂಸ್ಥೆ ಪ್ರಕರಣವನ್ನು ಅತ್ಯಂತ ಹಗುರವಾಗಿ ಪರಿಗಣಿಸಿರುವುದು ಸಾಬೀತಾಗಿದೆ.
ಇನ್ನು, ಈ ದುರಂತದಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ಮಾಡದಂತೆ ಈಗಾಗಲೇ ಗುಜರಾತ್‌ನ 2 ಬಾರ್ ಅಸೋಸಿಯೇಶನ್‌ಗಳು ನಿರ್ಣಯ ತೆಗೆದುಕೊಂಡಿವೆ.
https://pragati.taskdun.com/latest/invest-karnataka-2022pm-narendra-modispeach/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ