Kannada NewsKarnataka NewsLatest

ಬಿಜೆಪಿಗೆ ಸುಲಭ ಗೆಲುವು – ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಸುಲಭ ಗೆಲುವು ಲಭಿಸಲಿದೆ ಎನ್ನುವ ವಿಶ್ವಾಸವನ್ನು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ಕಳೆದ ಅನೇಕ ದಿನಗಳಿಂದ ನಾನು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಎಲ್ಲಕಡೆ ಬಿಜೆಪಿ ಅಭ್ಯರ್ಥಿ ಪರ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಎಲ್ಲಿಯೂ ಕಾಂಗ್ರೆಸ್ ಪಕ್ಷದ ಹೆಸರಿಲ್ಲ ಎಂದರು.

Home add -Advt

ಕಾಂಗ್ರೆಸ್ ಅಭ್ಯರ್ಥಿಯ ಸ್ವಂತ ಊರಾಗಿರುವ ಗೋಕಾಕ ತಾಲೂಕಿನಲ್ಲಿ ಕೂಡ ಕಾಂಗ್ರೆಸ್ ಹೆಸರು ಹೇಳುವವರಿಲ್ಲ. ಎಲ್ಲರೂ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಪಕ್ಷದ ಎಲ್ಲ ನಾಯಕರೂ ಒಟ್ಟಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದೇವೆ. ಎಲ್ಲರೂ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಜೊಲ್ಲೆ ಹೇಳಿದರು.

ಬೆಳಗಾವಿ: ಉಪಚುನಾವಣೆ ಮಾದರಿ ಮತಪತ್ರ ;ಯಾರದ್ದು ಯಾವ ನಂಬರ್?

ಬಿಜೆಪಿ ನಂಬಿ ಮತ ಹಾಕಿದ ಮತದಾರರಿಗೆ ಪಶ್ಚಾತ್ತಾಪ – ಎಂ.ಬಿ.ಪಾಟೀಲ

​ ಸತೀಶ್ ಜಾರಕಿಹೊಳಿ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವಿಶ್ರಾಂತ ಪ್ರಚಾರ

ಯಕ್ಸಂಬಾ ಭೀರೇಶ್ವರ ಸೊಸೈಟಿಗೆ 25.38 ಕೋಟಿ ರೂ. ಲಾಭ

Related Articles

Back to top button