Kannada NewsKarnataka NewsLatest

*ಮೂವರು ಪುಟ್ಟ ಮಕ್ಕಳೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ; ಬಾವಿಗೆ ಬಿದ್ದ 3 ಮಕ್ಕಳು ಸಾವು*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಮೂವರು ಮಕ್ಕಳೊಂದಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಾವಿಯಲ್ಲಿ ಬಿದ್ದ ಮೂವರು ಪುಟ್ಟ ಮಕ್ಕಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳಿಯಲ್ಲಿ ನಡೆದಿದೆ.

ಶ್ರೀಶೈಲ್ (5), ಶ್ರಾವಣಿ (3) ಹಾಗೂ 17 ದಿನದ ಸೌಜನ್ಯ ಮೃತ ಮಕ್ಕಳು. ಬಾವಿಗೆ ಹಾರಿದ್ದ ಪತ್ನಿ ಸಂಗೀತಾಳನ್ನು ಪತಿ ಹನುಮಂತ ರಕ್ಷಿಸಿದ್ದಾರೆ. ಮೂವರು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಓರ್ವ ಗಂಡು ಮಗು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ. ಮೊದಲ ಮಗ ಗಂಡು ಮಗುವಾಗಿದ್ದರೂ ಮೂರನೆಯದೂ ಗಂಡುಮಗುವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಂಗೀತಾಳಿಗೆ 17 ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ತೀವ್ರವಾಗಿ ನೊಂದಿದ್ದ ಸಂಗೀತಾ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಕ್ಕೆ ಸಂಗೀತಾ ವಿರುದ್ಧ ಜಮಖಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button