Kannada NewsKarnataka NewsLatestPolitics

*ಪೆನ್ ಡ್ರೈವ್ ನಲ್ಲಿರೋದೇ ಬೇರೆ ಸಬ್ಜಕ್ಟ್ ಎಂದ ಮಾಜಿ ಸಿಎಂ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಿನ್ನೆ ಕೃಷಿ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ನಿಗದಿ ಮಾಡಲಾಗಿರುವ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದರು. ಇದೀಗ ಪೆನ್ ಡ್ರೈವ್ ನಲ್ಲಿರುವ ವಿಷಯವೇ ಬೇರೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪೆನ್ ಡ್ರೈವ್ ನಲ್ಲಿರುವುದೇ ಬೇರೆ ಸಬ್ಜಕ್ಟ್. ಈಗ ನಾನು ಹೇಳುತ್ತಿರುವ ದರ ಪಟ್ಟಿಯೇ ಬೇರೆಯದ್ದು ಎಂದಿದ್ದಾರೆ.

ಪೆನ್ ಡ್ರೈವ್ ನಲ್ಲಿರೋದೇ ಬೇರೆ ವಿಷಯ. ಅದೇನು ಖಾಲಿ ಪೆನ್ ಡ್ರೈವ್ ಅಲ್ಲ. ನನಗೆ ಯಾರ ಮೇಲೂ ಧ್ವೇಷ ಅಸಮಾಧಾನವಿಲ್ಲ. ಪೆನ್ ಡ್ರೈವ್ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯಗಳಿವೆ. ಇನ್ನೂ 5 ವರ್ಷ ಟೈಮಿದೆ. ಈಗ ನಾನು ಹೇಳಲು ಹೊರಟಿರುವ ದರ ನಿಗದಿ ಪಟ್ಟಿ ಸೇರಿ ಇನ್ನೂ ಸಾಕಷ್ಟು ವಿಚಾರಗಳು ಚರ್ಚೆಯಾಗಬೇಕಿದೆ ಎಂದರು.


Related Articles

Back to top button