*ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ; ಹಾಕಿ ಆಟಗಾರನ ವಿರುದ್ಧ FIR ದಾಖಲು*
ಪ್ರಗತಿವಾಹಿನಿ ಸುದ್ದಿ: ಭಾರತದ ಹಾಕಿ ತಂಡದ ಆಟಗಾರ ಡಿಫೆಂಡರ್ ವರುಣ್ ಕುಮಾರ್ ವಿರುದ್ಧ ಯುವತಿಗೆ ವಂಚಿಸಿದ ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿದೆ.
17 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿ ಬಳಿಕ ಕೈಕೊಟ್ಟ ಆರೋಪ ವರುಣ್ ಕುಮಾರ್ ವಿರುದ್ಧ ಕೇಳಿಬಂದಿದ್ದು, ನೊಂದ ಯುವತಿ ಬೆಂಗಳೂರಿನ ಜ್ಞಾನ ಭಾರತಿ ಠಾಣೆ ಮೆಟ್ಟಿಲೇರಿದ್ದಾಳೆ. ವರುಣ್ ಕುಮಾರ್ ವಿರುದ್ಧ ಪೋಕ್ಸೋ ಕೇಸ್ ಅಡಿ ಎಫ್ ಐ ಆರ್ ದಾಖಲಾಗಿದೆ.
ವರುಣ್ ಕುಮಾರ್ ವಿರುದ್ಧ ಈ ಹಿಂದೆಯೂ ಯುವತಿ ದೂರು ನೀಡಿದ್ದಳು. ಆದರೆ ಹಾಕಿ ಆಟಗಾರನ ಕರಿಯರ್ ಹಾಳಾಗಬಾರದೆಂದು ಪೊಲೀಸರು ಪ್ರಕರಣ ದಾಖಲಿಸದೇ ವರುಣ್ ನನ್ನು ಕರೆಸಿ ಬುದ್ಧಿ ಹೇಳಿದ್ದರು. ಅಲ್ಲದೇ ಯುವತಿ ಜೊತೆ ರಾಜಿ ಮಾಡಿಸಿದ್ದರು. ಕೆಲ ವರ್ಷಗಳಲ್ಲಿ ಮದುವೆಗೂ ಒಪ್ಪಿದ್ದ. ಆನಂತರದಲ್ಲಿ ಯುವತಿಯೊಂದಿಗೆ ಚನ್ನಾಗಿಯೇ ಇದ್ದ ಎನ್ನಲಾಗಿದೆ. ಈಗ ಯುವತಿ ವಿವಾಹವಾಗುವಂತೆ ಕೇಳಿದ್ದಾಳೆ ಇದೀಗ ವರುಣ್ ಮತ್ತೆ ತನ್ನ ಹಳೆ ವರಸೆ ತೆಗೆದಿದ್ದು, ಮದುವೆಗೆ ಒಪ್ಪುತ್ತಿಲ್ಲ. ಇದರಿಂದ ಮನನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವರುಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ