Latest

ಶವ ಹಸ್ತಾಂತರಿಸದಿದ್ದರೆ ಆಸ್ಪತ್ರೆ ನೋಂದಣಿ ರದ್ದು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಿಲ್ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಕೊರೋನಾದಿಂದ ಮೃತಪಟ್ಟವರ ಶವ ಹಸ್ತಾಂತರಿಸಲು ನಿರಾಕರಿಸಿದಲ್ಲಿ ಅಂತಹ ಆಸ್ಪತ್ರೆಯ ನೊಂದಣಿ ರದ್ದುಪಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಈ ವಿಷಯದಲ್ಲಿ ಕೆಪಿಎಂಇ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಲ್ಲದೆ ಈ ರೀತಿ ಪ್ರಕರಣಗಳ ಕುರಿತು ವಾರಕ್ಕೊಮ್ಮೆ ವರದಿ ನೀಡುವಂತೆಯೂ ಆದೇಶಿಸಲಾಗಿದೆ.

ರಾಜ್ಯದಲ್ಲಿ ಅನೇಕ ಕಡೆ ಬಿಲ್ ಪಾವತಿಸಿದ ನಂತರವೇ ಶವ ಹಸ್ತಾಂತರಿಸುವುದಾಗಿ ಆಸ್ಪತ್ರೆಗಳು ಸತಾಯಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಿಲ್ ಪಾವತಿಸಲು ಒತ್ತಿಯುಸುವಂತಿಲ್ಲ ಅಥವಾ ಒತ್ತಡ ಹೇರುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇಂತಹ ಪ್ರಕರಣ ವರದಿಯಾದಲ್ಲಿ ತಕ್ಷಣ ಆಸ್ಪತ್ರೆಯ ನೊಂದಣಿಯನ್ನು ರದ್ದುಪಡಿಸಬೇಕು ಎಂದು ಆದೇಶಿಸಲಾಗಿದೆ.

ಮಗನ ಸಾವಿನ ಶಾಕ್: ಬೆಳಗಾವಿಯ ಶಿಕ್ಷಕನ ತಾಯಿಯೂ ವಿಧಿವಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button