ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನ ಸಮಾಧಿ ಮೂಡಿಗೆರೆ ಪಟ್ಟಣದಿಂದ ಕೆಲವೇ ಮೀಟರ್ ಗಳ ಅಂತರದಲ್ಲಿ ದೊರಕಿದೆ.
ಬಂಕಾಪುರದಲ್ಲಿರುವಾಗಲೇ ಕ್ರಿ. ಶ. 1141 ರಲ್ಲಿ ಅಕಾಲ ಮೃತನಾದನೆಂದು, ಆತನ ಶವವನ್ನು ಶಶಕಪುರ (ಅಂಗಡಿ) ಅಥವಾ ಮೂಲ ರಾಜಧಾನಿ ದ್ವಾರಸಮುದ್ರ (ಹಳೇಬೀಡಿ)ಗೆ ಕೊಂಡೊಯ್ದು ಪಟ್ಟದಾನೆಯ ಮೇಲೆ ಪಾರ್ಥಿವ ಶರೀರವನ್ನಿಟ್ಟು ರಾಜ್ಯ ಕೋಶದೊಂದಿಗೆ ನೂರಾರು ಆಪ್ತರೊಂದಿಗೆ ಮೂಡಿಗೆರೆ ಸುಂಡೇಕೆರೆ ಹಳ್ಳದ ಸಮೀಪ ಬರುವಾಗ ತಳಿಗೆನಾಡಿನ ಮರಿಯಾಳ ಪಳ್ಳಿಯ ಬಿಣ್ಣೆಗೌಡ ಮತ್ತು ಭೂತೇಗೌಡರು ಶವವನ್ನು ತಡೆದನು. ಈ ವೇಳೆ ರಾಜನ ಶವವನ್ನು ಸಾಗಿಸುತ್ತಿದ್ದ ಮುಖಂಡ ಬೊಪ್ಪಣ್ಣ ದೇವನಿಗೂ ಇವರಿಗೂ ಕಾಳಗವೇ ನಡೆದು ಅದರಲ್ಲಿ ಎದುರಾಳಿ ಭೂತೇಗೌಡ ಸಾವನ್ನಪ್ಪಿದನೆಂದು ಹೇಳಲಾಗಿದೆ.
ರಾಜ ವಿಷ್ಣುವರ್ಧನನ ಶವವನ್ನು ಸುಂಡೆಕೆರೆ ಹಳ್ಳದಿಂದ 500 ಮೀಟರ್ ದೂರದಲ್ಲಿ ಗುಂಡಿಯನ್ನು ತೋಡಿ ಶವವನ್ನು ಮಣ್ಣುಮಾಡಿ ಅದರ ಗುರುತಾಗಿ ಮೂರು ಅಡಿ ಎತ್ತರದ ನಾಲ್ಕು ಕಲ್ಲುಗಳನ್ನು ನಿಲ್ಲಿಸಲಾಗಿತ್ತು, ಅದರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಸಿಡಿಲು ಬಡಿದ ಕಾರಣ ಒಂದು ಕಲ್ಲು ಒಡೆದಿದ್ದು, ಇನ್ನುಳಿದ ಮೂರು ಕಲ್ಲುಗಳು ಎಲ್ ಆಕಾರದಲ್ಲಿ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ .
ಹೊಯ್ಸಳರ ಮೂಲ ಸ್ಥಾನ ತಾಲೂಕಿನ ಶಶಕಪುರ ಈಗಿನ ಅಂಗಡಿಯಾಗಿದೆ, ಹೊಯ್ಸಳರ ಸಂಪೂರ್ಣ ಇತಿಹಾಸಕ್ಕೆ ಸಂಬಂಧಿಸಿದ ಮೂರು ಪುಸ್ತಕಗಳನ್ನು ಪಡೆದ ಲಿಪಿಕಾರರು ಹೊಯ್ಸಳ ರಾಜ ವಿಷ್ಣುವರ್ಧನನ ಕೊನೆಯ ದಿನಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಭಾಸ್ಕರ್ ರಾವ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ