Latest

ಭಿಕ್ಷುಕಿಯಲ್ಲಿ ಕೊರೊನಾ ಸೋಂಕು; ಪೊಲೀಸ್ ಸಿಬ್ಬಂದಿ ಹೋಂ ಕ್ವಾರಂಟೈನ್

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 75 ವರ್ಷದ ಭಿಕ್ಷುಕಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಜೂನ್ 12ರಂದು ತುಮಕೂರು ಮೂಲದ ವೃದ್ಧ ಭಿಕ್ಷುಕಿ ಹುಬ್ಬಳ್ಳಿಗೆ ಬಂದಿದ್ದರು. ಆಕೆಯನ್ನು ವಾಹನದಲ್ಲಿ ಕರೆತಂದು ಹಾಸ್ಟೆಲ್ ಒಂದರಲ್ಲಿ ನಾಲ್ವರು ಪೊಲೀಸರು ಕ್ವಾರಂಟೈನ್ ಮಾಡಿಸಿದ್ದರು. ಇದೀಗ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದ ಭಿಕ್ಷುಕಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಕ್ವಾರಂಟೈನ್ ಮಾಡಿಸಿದ್ದ ನಾಲ್ವರು ಪೊಲೀಸರಲ್ಲೂ ಕೊರೊನಾ ಭೀತಿ ಎದುರಾಗಿದೆ.

ಈ ಹಿನ್ನಲೆಯಲ್ಲಿ ನಾಲ್ವರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಎಲ್ಲ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಿಸಲಾಗುತಿದ್ದು, ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಗಂಟಲು ದ್ರವನ್ನು ಟೆಸ್ಟ್ ಗೆ ಕಳುಹಿಸಲಾಗಿದೆ.

Related Articles

Back to top button