ನಿತೇಶ್ ಅಪಾರ್ಟ್ ಮೆಂಟ್ ಬಳಿ ಭಾರಿ ಗದ್ದಲ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ವಿಶ್ವಾಸಮತ ಯಾಚನೆಗೆ ಕೆಲವೇ ಕ್ಷಣಗಳಿರುವಾಗ ಬೆಂಗಳೂರಿನ ಖಾಸಗಿ ಅಪಾರ್ಟ್ ಮೆಂಟ್ ಬಳಿ ಭಾರಿ ಗದ್ದಲ ನಡೆಯುತ್ತಿದೆ.
ಪಕ್ಷೇತರ ಶಾಸಕರಿಬ್ಬರು ವಾಸವಾಗಿರುವ ನಿತೇಶ ಅಪಾರ್ಟ್ ಮೆಂಟ್ ಬಳಿ ಭಾರೀ ಗದ್ದಲ ನಡೆಯುತ್ತಿದ್ದು, ಕಾಂಗ್ರೆಸ್-ಬಿಜೆಪಿ ಶಾಸಕರು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.
ಪಕ್ಷೇತರ ಶಾಸಕರಿಬ್ಬರು ಬಿಜೆಪಿಗೆ ಬಂಬಲ ಘೋಷಿಸಿದ್ದಾರೆ. ಅವರನ್ನು ವಿಧಾನಸೌಧದಿಂದ ಕೆಲವೇ ಮೀಟರ್ ದೂರವಿರುವ ಅಪಾರ್ಟ್ ಮೆಂಟ್ನಲ್ಲಿ ಉಳಿಸಲಾಗಿದೆ. ಮತದಾನದ ಸಮಯಕ್ಕೆ ಕರೆತರುವ ಯಜನೆ ರೂಪಿಸಲಾಗಿತ್ತು.
ಆದರೆ ಅವರು ಅಲ್ಲಿರುವುದು ಇಂದು ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಪಕ್ಷೇತರರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಅವರು ಹೇಗೆ ಬಂದು ನಮ್ಮ ವಿರುದ್ಧ ಕೈ ಎತ್ತುತ್ತಾರೆ ನೋಡುತ್ತೇನೆ ಎಂದು ಕೆಲವೆ ಸಮಯದ ಹಿಂದೆ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿದ್ದರು.
ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆ ಸ್ ಕಾರ್ಯಕರ್ತರು ಅಪಾರ್ಟ್ಮೆಂಟ ಬಳಿ ಜಮಾಯಿಸಿದರು. ಇದು ಗೊತ್ತಾಗಿ ಬಿಜೆಪಿಯವರು ಸೇರಿದರು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಒದ್ದಾಡುತ್ತಿದ್ದಾರೆ.