Latest

ಸೌಥ್ ಆಫ್ರಿಕಾ ಮಣಿಸಿ ತನ್ನದೇ ದಾಖಲೆ ಸರಿಗಟ್ಟಿದ ಭಾರತ

ಪ್ರಗತಿವಾಹಿನಿ ಸುದ್ದಿ; ರಾಂಚಿ: ರಾಂಚಿಯಲ್ಲಿ ನಡೆದ ಸೌಥ್ ಆಫ್ರಿಕಾ ವಿರುದ್ಧದ ಏಕ ದಿನ ಕ್ರಿಕೇಟ್ ನ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 7 ವಿಕೇಟ್ ಗಳಿಂದ ಜಯ ಗಳಿಸಿದೆ.

ಮೊದಲು ಬ್ಯಾಟ್ ಮಾಡಿದ ಸೌಥ್ ಆಫ್ರಿಕಾ ತಂಡ 7 ವಿಕೇಟ್ ನಷ್ಟಕ್ಕೆ 278 ರನ್ ಪೇರಿಸಿತ್ತು. ಚೇಸ್ ಗೆ ಇಳಿದ ಭಾರತ ತಂಡ ಮೂರು ವಿಕೇಟ್ ನಷ್ಟಕ್ಕೆ 45.5 ಓವರ್ ನಲ್ಲಿ 282 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತದ ಪರ ಶ್ರೇಯಸ್ ಅಯ್ಯರ್ ಶತಕ ಭಾರಿಸಿದರು. ಒನ್ ಡೇ ಕ್ರಿಕೇಟ್ ನಲ್ಲಿ ಇದು ಅವರ ಎರಡನೇ ಶತಕವಾಗಿದೆ.

ದಾಖಲೆ ಸರಿಗಟ್ಟಿದ ಭಾರತ:
ದಕ್ಷಿಣ ಆಫ್ರಿಕಾ ವಿರುದ್ದದ 2 ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಒಂದೇ ವರ್ಷದಲ್ಲಿ ಸತತ 37 ಏಕ ದಿನ ಪಂದ್ಯಗಳಲ್ಲಿ ಜಯ ಸಾಧಿಸಿದಂತಾಗಿದೆ. ಇದರಿಂದ ಭಾರತ ತಂಡ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಂತಾಗಿದೆ. ಈ ಹಿಂದೆ 2017ರಲ್ಲಿಯೂ ಭಾರತ ಒಂದೇ ವರ್ಷದಲ್ಲಿ 37 ಪಂದ್ಯಗಳನ್ನು ಗೆದ್ದಿತ್ತು. ಹಾಗಾಗಿ ಈಗ ತನ್ನದೇ ದಾಖಲೆಯನ್ನು ಸರಿಗಟ್ಟಿದಂತಾಗಿದೆ.

ಜೊಮೆಟೋ ಡ್ರೆಸ್ ಹಾಕಿಕೊಂಡು ಪಾರ್ಸೆಲ್ ಹೊತ್ತು ಈ ವ್ಯಕ್ತಿ ಮನೆ ಬಾಗಿಲಿಗೆ ಬರ್ತಾನೆ ಇದಾರೆ; ಯಾರಿಗೂ ಗುರುತೇ ಸಿಕ್ಕಿಲ್ಲ !

Home add -Advt

https://pragati.taskdun.com/latest/zomato-ceodelivers-ordersonce-in-3-monthsnobody-recognised-him/

Related Articles

Back to top button