ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ವಿದೇಶದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದ್ದ ಮಂಕಿಪಾಕ್ಸ್ ಸೋಂಕು ಪ್ರಕರಣ ಭಾರತದಲ್ಲಿಯೂ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಯುಎಇಯಿಂದ ವಾಪಸ್ ಆಗಿದ್ದ ಕೇರಳದ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿತ್ತು. ಆರೋಗ್ಯ ಇಲಾಖೆ ರ್ಗಿಯ ಸ್ಯಾಂಪಲ್ ನ್ನು ಪುಣೆ ಲ್ಯಾಬ್ ಗೆ ರವಾನಿಸಿತ್ತು.
ಇದೀಗ ವ್ಯಕ್ತಿಯ ರಕ್ತದ ಸ್ಯಾಂಪಲ್ ವರದಿ ಬಂದಿದ್ದು, ಕೇರಳದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಮಂಕಿಪಾಕ್ಸ್ ವೈರಲ್ ಝೂಜೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣ ಹೊಂದಿದೆ. ರೋಗದ ಹರಡುವಿಕೆ ವೇಗವಾಗಿದ್ದರೂ ಅದರಿಂದ ಜೀವ ಕಳೆದುಕೊಳ್ಳುವ ಆತಂಕ ಕಡಿಮೆ. ಕೇಂದ್ರ ಸರ್ಕಾರ ಮಂಕಿಪಾಕ್ಸ್ ಕಾಯಿಲೆ ಬಗ್ಗೆ ಎಲ್ಲಾ ರಾಜ್ಯಗಳು ಎಚ್ಚರ ವಹಿಸುವಂತೆ ಸೂಚಿಸಿದೆ.
ಮನುಷ್ಯನ ಮನಸ್ಸು ಶುದ್ಧವಾಗಿದ್ದರೆ ಸಕಲ ಕಾರ್ಯವೂ ಸಫಲ: ಬಸವರಾಜೇಂದ್ರ ಶ್ರೀಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ