Latest

ತೈಲ ಟ್ಯಾಂಕರ್ ನಲ್ಲಿ ಅಗ್ನಿ ಅವಗಢ; ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದ ನೌಕಾಪಡೆ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ; ಕೊಲಂಬೋ: ಭಾರತದ ತೈಲ ಟ್ಯಾಂಕರ್ ಎಂಟಿ ನ್ಯೂ ಡೈಮಂಡ್ ನಲ್ಲಿ ಕಾಣಿಸಿಕೊಂದಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಕೊಲ್ಲಿ ರಾಷ್ಟ್ರದಿಂದ ಭಾರತದ ಪಾರ್ ದ್ವೀಪಕ್ಕೆ ತೈಲ ಕೊಂಡೊಯ್ಯುತ್ತಿದ್ದ ವೇಳೆ ಶ್ರೀಲಂಕಾದ ಸಮುದ್ರದಲ್ಲಿ ಭಾರತದ ತೈಲ ಟ್ಯಾಂಕರ್ ಗೆ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಭಾರತದ ಕರಾವಳಿ ತೀರಪಡೆಯ ಐಎನ್ ಎಸ್ ಶೌರ್ಯ, ಸಾರಂಗ್ ಮತ್ತು ಸಮುದ್ರ ಪಹೇರಾದಾರ್ ನೌಕಾಪಡೆಗಳು ಬೆಂಕಿ ನಿಯಂತ್ರಿಸುವಲ್ಲಿ ನಿರತವಾಗಿವೆ.

Home add -Advt

ತಿರುವನಂತಪುರಕ್ಕೆ ಸಮೀಪವಿದ್ದಾಗ ತೈಲ ಟ್ಯಾಂಕರ್ ನಲ್ಲಿ ಈ ಅವಘಡ ಸಂಭವಿಸಿತ್ತು. ಶ್ರೀಲಂಕಾ ನೌಕಾಪಡೆಯ ಸಹಕಾರದಿಂದ ಇದೀಗ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ.

Related Articles

Back to top button