Latest

ಡ್ರಗ್ಸ್ ಸೇವಿಸುತ್ತಿದ್ರಾ ನಟಿ ರಾಗಿಣಿ…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ನಟಿ ರಾಗಿಣಿ ಕೂಡ ಡ್ರಗ್ಸ್ ಸೇವಿಸುತ್ತಿದ್ದರು ಎಂದಿದ್ದಾನೆ.

ರವಿಶಂಕರ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ನೀಡಿದ ಹಲವು ಮಾಹಿತಿಗಳು ಸಿಸಿಬಿ ಅಧಿಕಾರಿಗಳನ್ನೇ ಶಾಕ್ ಆಗುವಂತೆ ಮಾಡಿದೆ. ನಟಿ ರಾಗಿಣಿ ತಮಗೆ ಕಳೆದ ಮೂರು ವರ್ಷಗಳಿಂದ ಮಾತ್ರ ಪರಿಚಯ. ನನಗಿಂತ ಮೊದಲೇ ರಾಗಿಣಿಗೆ ಡ್ರಗ್ಸ್ ಪೆಡ್ಲರ್ ನಂಟಿತ್ತು ಎಂದಿದ್ದಾನೆ.

Home add -Advt

ಅಲ್ಲದೇ ನಾವು ಹಲವು ಬಾರಿ ರಾಗಿಣಿ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದೆವು. ನಾನು ಗಾಂಜಾ ಮಾತ್ರ ಸೇವಿಸುತ್ತಿದ್ದೆ. ನಟಿ ರಾಗಿಣಿ ಆಗಾಗ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಆದರೆ ನಾವು ಡ್ರಗ್ಸ್ ಮಾರಾಟದಲ್ಲಿ ಯಾವತ್ತೂ ಭಾಗಿಯಾಗಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ರವಿಶಂಕರ್ ರಾಗಿಣಿ ಹೆಸರು ಬಾಯ್ಬಿಡುತ್ತಿದ್ದಂತೆಯೇ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು ನಟಿಯ ಮನೆ ಮೇಲೆ ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

Related Articles

Back to top button