Karnataka News

ಇಂಡೋ – ಆಫ್ರಿಕನ್ ಬಿಸಿನೆಸ್ ರಿಲೇಶನ್: ಬೆಳಗಾವಿಯಲ್ಲಿ ಮಹತ್ವದ ಕಾನ್ಫರೆನ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಭಾರತ- ಆಫ್ರಿಕಾ ಶೈಕ್ಷಣಿಕ ಹಾಗೂ ಔದ್ಯಮಿಕ ಸಂಬಂಧದ ದೃಷ್ಟಿಯಿಂದ ಮೈಲಿಗಲ್ಲಾಗಬಹುದಾದ  ಬೃಹತ್  ಅಂತಾರಾಷ್ಟ್ರೀಯ ಸಮ್ಮೇಳನಇಂಡೋ ಆಫ್ರಿಕನ್ ಬಿಸಿನೆಸ್ – ಸ್ಟ್ರೆಟಜಿಕ್ ಪ್ರೊಸ್ಪೆಕ್ಟಿವ್   2 ದಿನ ಬೆಳಗಾವಿಯಲ್ಲಿ ನಡೆಯಲಿದೆ.

ಜನೆವರಿ 24 ಮತ್ತು 25ರಂದು ನಗರದ ಕೆಎಲ್ಎಸ್ ಜಿಐಟಿ ಕಾಲೇಜಿನಲ್ಲಿ ಸಮ್ಮೇಳನ ನಡೆಯಲಿದ್ದು, ವರ್ಚ್ಯುವಲ್ ಆಗಿಯೂ ಎರಡೂ ರಾಷ್ಟ್ರಗಳ ಹಲವಾರು ಗಣ್ಯರು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಲೀಧರನ್ ಅವರನ್ನು ಸಮ್ಮೇಳನ ಉದ್ಘಾಟನೆಗೆ ಆಹ್ವಾನಿಸಲಾಗಿದ್ದು, ಕೊರೋನಾ ಕಾರಣದಿಂದಾಗಿ ಅವರು ಬೆಳಗಾವಿಗೆ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೋ, ವರ್ಚ್ಯುವಲ್ ಆಗಿ ಉದ್ಘಾಟಿಸಲಿದ್ದಾರೋ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಇಥಿಯೋಫಿಯಾದ ವೊಕೈ ಯುನಿವರ್ಸಿಟಿ ಮತ್ತು ಆಫ್ರಿಕನ್ ಸ್ಟಡೀಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ.

ಸೆಂಟರ್ ಫಾರ್ ಆಫ್ರಿಕನ್ ಸ್ಟಡೀಸ್ ಚೇರಮನ್ ಡಾ.ಅಜಯ್ ಕುಮಾರ ದುಬೇ, ಇಥಿಯೋಫಿಯಾದ ವೊಕೈ ಯುನಿವರ್ಸಿಟಿಯ ಅಧ್ಯಕ್ಷ ಡಾ.ಫೆರಿಸ್ ಡೆಲಿಲ್ ಯುಸೂಫ್, ಜಿಐಟಿ ಎಂಬಿಎ ವಿಭಾಗದ ಡೀನ್ ಡಾ.ಕೃಷ್ಣಶೇಖರ್ ಲಾಲ್ ದಾಸ್, ಸಿಸಿಎಆರ್ ಇ -ಸಿಜಿಕೆ ಕನ್ಸ್ಟ್ರಕ್ಷನ್ ಆ್ಯಂಡ್ ರಿಯಲ್ ಎಸ್ಟೇಸ್ ಪ್ರೈವೇಟ್ ಲಿಮಿಟೆಡ್ ಫೌಂಡರ್, ಕರ್ನಾಟಕ ಕ್ರೆಡೈ ಚೇರಮನ್ ಚೈತನ್ಯ ಕುಲಕರ್ಣಿ, ಪ್ರೊ.ಸುಡಿಪ್ಟೋ ಭಟ್ಟಾಚಾರ್ಯ ದಿಕ್ಸೂಚ್ ಭಾಷಣ ಮಾಡಲಿದ್ದಾರೆ.

ಸಮ್ಮೇಳನದ ಯಶಸ್ಸಿಗೆ ಹಲವಾರು ಸಮಿತಿಗಳನ್ನು ಮಾಡಲಾಗಿದೆ.

ಆಫ್ರಿಕಾದ ಉದ್ಯಮ ವ್ಯವಹಾರದಲ್ಲಿ ಚೈನೀಸ್ ಪ್ರಾಬಲ್ಯ ಹೆಚ್ಚಾಗಿದ್ದು, ಭಾರತ ಅಲ್ಲಿ ಪ್ರವೇಶಿಸುವುದರಿಂದ ಹೆಚ್ಚು ಪ್ರಾಬಲ್ಯ ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ಕಂಡುಕೊಳ್ಳಲಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ದ್ವಿಪಕ್ಷೀಯ ಒಪ್ಪಂದ ವೃದ್ದಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆಫ್ರಿಕನ್ ರಾಷ್ಟ್ರಗಳಲ್ಲಿ ಶಿಕ್ಷಣ, ಉದ್ಯಮ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ಭಾರತ ಸರಕಾರ 34 ಬಿಲಿಯನ್ ಗಳಷ್ಟು ಹಣ ಹೂಡಲು ಮುಂದಾಗಿದೆ. ಭಾರತೀಯರು ಬಹುತೇಕ ಎಲ್ಲ ರೀತಿಯ ಉದ್ಯಮಗಳನ್ನು ಮಾಡಲು  ಆಫ್ರಿಕಾದಲ್ಲಿ ಅವಕಾಶವಿದೆ.  ಮುಂದಿನ 15 ವರ್ಷಗಳಲ್ಲಿ ಭಾರತ  ಆಫ್ರಿಕಾದ ವ್ಯವಹಾರಗಳ ದೊಡ್ಡ ಪಾಲನ್ನು ಪಡೆಯುವ ಸಾಧ್ಯತೆ ತೆರೆದುಕೊಂಡಿದೆ.

ಸರಕಾರದ ನೀತಿಯಲ್ಲಿ ಬದಲಾವಣೆ ಅಗತ್ಯ

ಚೈನಾದ ಉದ್ಯಮಿಗಳು ಈಗಾಗಲೆ ಆಫ್ರಿಕನ್ ರಾಷ್ಟ್ರಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಚೈನಾ ಸರಕಾರವೇ ತನ್ನ ಉದ್ಯಮಿಗಳಿಗೆ ಆಫ್ರಿಕಾದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಿದೆ. ಹಾಗಾಗಿ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗುತ್ತದೆ.

ಆದರೆ ಭಾರತೀಯ ಉದ್ಯಮಿಗಳಿಗೆ ಅಂತಹ ಅವಕಾಶವನ್ನು ಸರಕಾರ ಮಾಡಿಕೊಡುತ್ತಿಲ್ಲ. ಅಲ್ಲಿನ ಇಂಡಿಯನ್ ರಾಯಬಾರ ಕಚೇರಿ ಕೂಡ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಇಲ್ಲಿನ ಉದ್ಯಮಿಗಳು ಸ್ವಸಾಮರ್ಥ್ಯದ ಮೇಲೆ ಹೋಗಬೇಕು, ಅಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಭಾರತ ಸರಕಾರ ಈ ದಿಸೆಯಲ್ಲಿ ತನ್ನ ನೀತಿಯನ್ನು ಬದಲಾಯಿಸಿಕೊಂಡರೆ ಬಹಳಷ್ಟು ಉದ್ಯಮಿಗಳು ದಕ್ಷಿಣ ಆಫ್ರಿಕಾದಲ್ಲಿನ ಪೂರಕ ವಾತಾವರಣವನ್ನು ಬಳಸಿಕೊಳ್ಳಲು ಸಾಧ್ಯವಿದೆ.

ಶೈಕ್ಷಣಿಕ ಮತ್ತು ಔದ್ಯಮಿಕ ವ್ಯವಹಾರ ವೃದ್ದಿಯ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ. ಕೇಂದ್ರ ಸಚಿವ ಮುರಳೀಧರನ್ ಅವರನ್ನು ಆಹ್ವಾನಿಸಲಾಗಿದ್ದು, ಸೋಮವಾರದ ಹೊತ್ತಿಗೆ ಅವರ ಆಗಮನದ ಕುರಿತು ಖಚಿತವಾಗಲಿದೆ.

ಜಿಐಟಿ ಎಂಬಿಎ ವಿಭಾಗದ ಡೀನ್ ಡಾ.ಕೃಷ್ಣಶೇಖರ್ ಲಾಲ್ ದಾಸ್

ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –  Broucher 2

 

ಆಫ್ರಿಕಾದಲ್ಲಿ 6000 ಮನೆ ಕಟ್ಟಲಿರುವ ಚೈತನ್ಯ ಕುಲಕರ್ಣಿ

ಚೈತನ್ಯ ಕುಲಕರ್ಣಿ

ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ, ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಆಫ್ರಿಕಾದಲ್ಲಿ 6000 ಮನೆಗಳನ್ನು ಕಟ್ಟಲಿದ್ದಾರೆ.

ಅಲ್ಲಿನ ಸರಕಾರಿ ನೌಕರರು ಮತ್ತು ಸಾಮಾನ್ಯ ನಾಗರಿಕರಿಗಾಗಿ ಕೈಗೆಟಕುವ ಬೆಲೆಯಲ್ಲಿ ಈ ಮನೆಗಳು ನಿರ್ಮಾಣವಾಗಲಿವೆ. ಇದಕ್ಕಾಗಿ ಈಗಾಗಲೆ ಒಪ್ಪಂದಕ್ಕೆ ಸಹಿಯಾಗಿದೆ.

ಕರ್ನಾಟಕದ ಉದ್ಯಮಿಯೊಬ್ಬರು ಆಫ್ರಿಕಾದಲ್ಲಿ ಮಾಡುತ್ತಿರುವ ಮೊದಲ ಮತ್ತು ಏಕೈಕ ಹೂಡಿಕೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕ್ರಿಶಿಲ್ ರೇಟಿಂಗ್ ನಲ್ಲಿ ಚೈತನ್ಯ ಕುಲಕರ್ಣಿ ಅವರ ನಿತ್ಯ ಚೈತನ್ಯ ಕಂಪನಿ 2017ರಲ್ಲಿ 7 ಸ್ಟಾರ್  ರೇಟಿಂಗ್ ಪಡೆದಿತ್ತು. ಭಾರತದಲ್ಲೇ ಟಾಪ್ 100 ಕಂಪನಿಗಳಲ್ಲಿ ಸೇರ್ಪಡೆಯಾಗಿತ್ತು. ಇದನ್ನು ಗಮನಿಸಿದ ಆಫ್ರಿಕಾ ಸರಕಾರ ಚೈತನ್ಯ ಕುಲಕರ್ಣಿ ಅವರಿಗೆ ಹೂಡಿಕೆಗೆ ಆಹ್ವಾನ ನೀಡಿತ್ತು.

ಇದರಿಂದಾಗಿ ಆಫ್ರಿಕಾದೊಂದಿಗೆ ಭಾರತದ ಸಂಬಂಧ ಮತ್ತು ಗೌರವ ಹೆಚ್ಚಲಿದೆ. ಕಳೆದ 2 ವರ್ಷದಿಂದಲೇ ವ್ಯವಹಾರ ಮಾತುಕತೆ ನಡೆದಿದ್ದು, ಕೊರೋನಾ ಕಾರಣದಿಂದಾಗಿ ವಿಳಂಬವಾಗಿದೆ.

ಚೈತನ್ಯ ಕುಲಕರ್ಣಿ ಅವರು ಈ ವ್ಯವಹಾರ ಕರ್ನಾಟಕಕ್ಕೆ, ಅದರಲ್ಲೂ ಬೆಳಗಾವಿಗೆ ದೊಡ್ಡ ಹೆಮ್ಮೆಯಾಗಿದೆ.

ಕ್ರೆಡೈ ರಾಜ್ಯಾಧ್ಯಕ್ಷರಾಗಿ ಚೈತನ್ಯ ಕುಲಕರ್ಣಿ ಆಯ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button