Latest

ಸಿಎಂ ಬೊಮ್ಮಾಯಿ ಹೆಬ್ಬೆಟ್ಟು ಎನ್ನುವುದಾದ್ರೆ ನಿಮ್ಮನ್ನು ಏನಂತಾ ಕರೀಬೇಕು?

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೆಬ್ಬೆಟ್ಟು ಎಂದು ಟೀಕಾಪ್ರಹಾರ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ. ದೇವೇಗೌಡರ ಕುಟುಂಬ ಹೇಳಿದ ತಕ್ಷಣ ಹೆಬ್ಬೆಟ್ಟು ಒತ್ತಲು ನಮ್ಮದು ಜೆಡಿಎಸ್ ಪಕ್ಷವಲ್ಲ, ರಾಷ್ಟ್ರೀಯ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಹಿಗ್ಗಾ ಮುಗ್ಗಾ ಕಿಡಿಕಾರಿದ್ದಾರೆ. ಬಿಜೆಪಿ ನ್ಯಾಷನಲ್ ಪಾರ್ಟಿ, ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles
Home add -Advt

ಜೆಡಿಎಸ್ ನಲ್ಲಿ ದೇವೇಗೌಡರು ಹೇಳಿದರೆ ಮಾತ್ರ ಹೆಬ್ಬೆಟ್ಟು ಒತ್ತುವುದು. ಜೆಡಿಎಸ್ ನಲ್ಲಿ ಅಂದಿಗೂ, ಇಂದಿಗೂ, ಮುಂದಿಗೂ ದೇವೇಗೌಡರದ್ದೇ ದರ್ಬಾರ್. ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ. ಹೆಚ್.ಡಿ.ದೇವೇಗೌಡರ ಕುಟುಂಬ ಹೇಳಿದರೆ ಮಾತ್ರ ಹೆಬ್ಬೆಟ್ಟು ಒತ್ತುವುದು. ಅದಕ್ಕೆ ಅದು ಹೆಬ್ಬೆಟ್ಟು ಪಾರ್ಟಿ. ನಮ್ಮದು ನ್ಯಾಷನಲ್ ಪಾರ್ಟಿ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಜೆಡಿಎಸ್ ನಂತೆ ಕುಟುಂಬ ರಾಜಕಾರಣ ಇಲ್ಲ. ಜೆಡಿಎಸ್ ನಲ್ಲಿ ಅಂದು, ಇಂದು, ಮುಂದೆಯೂ ದೇವೇಗೌಡರದ್ದೇ ದರ್ಬಾರ್ ನಡೆಯುತ್ತಿದೆ. ದೇವೇಗೌಡರ ಕುಟುಂಬದವರು ಹೇಳಿದ್ರೆ ಇಡೀ ಪಕ್ಷದವರೇ ಹೆಬ್ಬೆಟ್ಟು ಒತ್ತುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಯಾರೋ ಹೇಳಿದರು ಎಂದ ಮಾತ್ರಕ್ಕೆ ಹೆಬ್ಬೆಟ್ಟು ಒತ್ತಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಅನಕ್ಷರಸ್ಥರಲ್ಲ. ಅವರು ಎಂಜಿನಿಯರಿಂಗ್ ಪದವೀಧರ. ನಾಲ್ವರು ಸಿಎಂ ಗಳ ಜೊತೆ ಪಳಗಿದವರು. ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ದೇವೇಗೌಡರು, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬೊಮ್ಮಾಯಿ ಅವರು ಪಳಗಿದವರು. ಅವರ ತಂದೆಯವರೂ ಸಿಎಂ ಆಗಿದ್ದವರು. ಹೀಗಿರುವಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನೇ ಹೆಬ್ಬೆಟ್ಟು ಎಂದು ನೀವು ಟೀಕಿಸುವುದಾದರೆ ನಿಮ್ಮನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಹಾಗೂ ಸಿಎಂ ಬೊಮ್ಮಾಯಿ ಆಡಳಿತ ವೈಖರಿ ಕಂಡು ಹೊಟ್ಟೆ ಉರಿಯಿಂದ ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಂತು ದಿನಕ್ಕೊಂದು ವಿಷಯ ಪ್ರಸ್ತಾಪ ಮಾಡಿ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ

https://pragati.taskdun.com/cm-basavaraj-bommaidr-vishnuvardhan-smarakabharathi-vishnuvardhanmysore/

Related Articles

Back to top button