Latest

5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ‌; 1 ಲಕ್ಷ ಜನರಿಗೆ ಉದ್ಯೋಗ ಅವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ಜಾಗತಿಕ ಉದ್ದಿಮೆಗಳಿಗೆ ಬೆಂಗಳೂರೇ ಗಮ್ಯವಾಗಿದೆ. ಎಲ್ಲಾ ಜಾಗತಿಕ ಉದ್ದಿಮೆಗಳ ಹಾದಿಗಳು ಬೆಂಗಳೂರಿಗೆ ಬಂದು ಸೇರುತ್ತಿವೆ. ನಾಳೆಯಿಂದ ಪ್ರಾರಂಭವಾಗುವ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ನಾಳೆ ಆರಂಭವಾಗುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದರು.

ಮುಂದಿನ 5 ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿ
ಇನ್ವೆಸ್ಟ್ ಕರ್ನಾಟಕ ಇಡೀ ಜಗತ್ತಿನ ಗಮನವನ್ನು ಸೆಳೆಯಲಿದೆ. ಜಗತ್ತಿನ ಹೂಡಿಕೆಯೂ ಇಲ್ಲಿಗೆ ಬರುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯ ವಾತಾವರಣ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿಯನ್ನು ಹಾಕಲಿದೆ.
ಇದೊಂದು ಬಹಳ ಮಹತ್ವದ ಸಮ್ಮೇಳನ. ಎಲ್ಲಾ ಜಾಗತಿಕ ಹಾಗೂ ದೇಶದ ಎಲ್ಲ ಬಂಡವಾಳ ಹೂಡಿಕೆದಾರರಿಗೆ, ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಹಾಗೂ ಐ.ಟಿ ಬಿಟಿ ಪರಿಣಿತರಿಗೆ, ಸ್ಟಾರ್ಟ್ ಗಳಿಗೆ ಹಾಗೂ ಯುವ ಇಂಜಿನಿಯರ್ ಗಳಿಗೆ, ತಂತ್ರಜ್ಞರು ಇದರಲ್ಲಿ ಭಾಗವಹಿಸಲು ಸ್ವಾಗತ ಕೋರುತ್ತೇನೆ ಎಂದರು.

ಕರ್ನಾಟಕ ಹಾಗೂ ಹೂಡಿಕೆದಾರರ ಬದ್ಧತೆ
5. ಲಕ್ಷ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆ‌ ಇದೆ. ಈ ಪೈಕಿ ಈಗಾಗಲೇ 2.8. ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇದು ನಮ್ಮ ರಾಜ್ಯದ ಹಾಗೂ ಹೂಡಿಕೆದಾರರ ಬದ್ಧತೆ. ನಾಳೆ ಅವರಿಗೆ ಹೂಡಿಕೆಯ ಪ್ರಮಾಣ ಪತ್ರ ನೀಡುತ್ತಿದ್ದು, ಹೊಸದಾಗಿ ಬಂಡವಾಳ ಹೂಡಿಕೆದಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯ ಮಟ್ಟದ ಅನುಮೋದನೆ ನೀಡಲಾಗುವುದು ಎಂದರು. ಕರ್ನಾಟಕ ಔದ್ಯೋಗಿಕ ರಂಗದಲ್ಲಿ ಪ್ರಗತಿಯ ದಾಪುಗಾಲನ್ನು ಇಟ್ಟಿದ್ದು, ನಾಳಿನ ಸಮಾವೇಶ ಅದಕ್ಕೆ ಸಾಕ್ಷಿಯಾಗಲಿದೆ ಎಂದರು.

ಬಿಯಾಂಡ್ ಬೆಂಗಳೂರು
ಬೆಂಗಳೂರೀನಾಚೆ ಹೂಡಿಕೆಗೆ ಬಹಳಷ್ಟು ಹೂಡಿಕೆದಾರರು ಆಸಕ್ತಿ ತೋರಿದ್ದು, ರಾಮನಗರ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಕಲಬುರ್ಗಿ, ಮೈಸೂರು ಎಲ್ಲ ಕಡೆ ಬಂಡವಾಳ ಹೂಡಿ ಕೈಗಾರಿಕೆಗಳು ಬರುತ್ತಿವೆ. ಪ್ರಾದೇಶಿಕ ಅಡೆತಡೆಗಳನ್ನು ದಾಟಿ ಇಂದು ಕೈಗಾರಿಕೆಗಳು ಬರುತ್ತಿವೆ. ಬಿಯಾಂಡ್ ಬೆಂಗಳೂರು ಕನಸು ನನಸಾಗುತ್ತಿದೆ. ಸಮಗ್ರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ನಾಳೆಯಿಂದ ಎಲ್ಲಾ ವಿವರಗಳನ್ನು ಪ್ರತಿ ದಿನ ನೀಡಲಾಗುವುದು. 28 ರಂದು ಹುಬ್ಬಳ್ಳಿಯಲ್ಲಿ ಎಫ್.ಎಂ. ಸಿ.ಜಿ ಕ್ಲಸ್ಟರ್ ಉದ್ಘಾಟಿಸಿದ್ದು, ಧಾರವಾಡದಲ್ಲಿ ಕ್ಲಾಸ್ಟ್ ಬರಲಿದೆ. ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಗುಲ್ಬರ್ಗಾ, ಬಿಜಾಪುರ, ರಾಯಚೂರು ಜಿಲ್ಲೆಗಳಲ್ಲಿ ಜವಳಿ ಪಾರ್ಕ್ , ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಮೈಸೂರಿನಲ್ಲಿ ಎಲೆಕ್ಟ್ರಾನಿಕ್ , ತುಮಕೂರಿನಲ್ಲಿ ರಕ್ಷಣಾ ಉತ್ಪಾದನೆ ಘಟಕ ಬರಲಿವೆ ಎಂದರು.

ಒಂದು ಟ್ರಿಲಿಯನ್ ಡಾಲರ್ ಕೊಡುಗೆ
ಎಲ್ಲಾ ದೃಷ್ಟಿಯಿಂದ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ನವ ಕರ್ನಾಟಕ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಧಾನಿಗಳ 5 ಟ್ರಿಲಿಯನ್ ಆರ್ಥಿಕತೆಯ ಕನಸಿಗೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ ಎಂದರು.

ಮುಂಚೂಣಿಯಲ್ಲಿ ಕರ್ನಾಟಕ

ಭಾರತದಲ್ಲಿ ಕರ್ನಾಟಕ ಅತ್ಯಂತ , ಚೈನಾ ದೇಶದಲ್ಲಿ ಇದ್ದಂಥ ಇಕೋ ಸಿಸ್ಟಮ್ ಹೊಂದಿದೆ. ಕೃಷಿ ಕ್ಷೇತ್ರ ಅತ್ಯಂತ ಸಧೃಡವಾಗಿದೆ. ದ್ವಿತೀಯ ವಲಯದ ಉತ್ಪಾದನೆಯಲ್ಲಿ ಕರ್ನಾಟಕ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಕಳೆದ 4 ದಶಕಗಳಲ್ಲಿ ಉತ್ಪಾದನೆಯಲ್ಲಿ ಕರ್ನಾಟಕ ಬಹಳಷ್ಟು ಸಾಧನೆಯನ್ನು ಮಾಡಿದೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇಂಧನ ವಲಯ, ಕಬ್ಬಿಣ ಮತ್ತು ಉಕ್ಕು ಹೀಗೆ ಎಲ್ಲಾ ವಲಯಗಳಲ್ಲಿ ಕರ್ನಾಟಕ ಮುಂದಿದೆ ಎಂದರು.

ಇದರ ಜೊತೆಗೆ ಎಲೆಕ್ಟ್ರಾನಿಕ್, ಕೃತಕ ಬುದ್ಧಿಮತ್ತೆಯಲ್ಲಿ ರಾಜ್ಯದಲ್ಲಿ ಭದ್ರ ಬುನಾದಿಯನ್ನು ಹಾಕಲಾಗಿದೆ. ಐಟಿ ಬಿಟಿಯಲ್ಲಿ ಕಳೆದ ಎರಡು ದಶಕಗಳಿಂದ ನಾವು ಮುಂಚೂಣಿ ಯಲ್ಲಿದ್ದೇವೆ. ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ದೇಶದ ಶೇ 40% ರಷ್ಟು ಐಟಿ ಬಿಟಿ ರಪ್ತು ಕರ್ನಾಟಕದಿಂದ ಆಗುತ್ತಿದೆ. ಅತಿ ಹೆಚ್ಚು ಉದ್ಯೋಗ ಐಟಿ ಬಿಟಿ ಸೃಷ್ಟಿ ಯಾಗಿರುವುದು ಕರ್ನಾಟಕದಲ್ಲಿ. ಕೃಷಿ ಉತ್ಪಾದನೆ, ಐ.ಟಿ ಬಿಟಿ ಈಗ ಸ್ಟಾರ್ಟ್ ಅಪ್ , ಯೂನಿಕಾರ್ ಹಾಗೂ ಡೆಕಾ ಕಾರ್ನ್ ನಲ್ಲಿ ಮುಂಚೂಣಿಯಲ್ಲಿದೆ.‌ ಈ ಎಲ್ಲಾ ರಂಗಗಳಲ್ಲಿ ಕರ್ನಾಟಕ ಮುಂಚೂಣಿ ಯಲ್ಲಿದೆ. ಈಗ ಡಬಲ್ ಪ್ಲಸ್ ಆಗಿದೆ ಎನ್ನಬಹುದು. ದೊಡ್ಡ ಪ್ರಮಾಣದ ಹೂಡಿಕೆ ಕರ್ನಾಟಕದಲ್ಲಿ ಆಗುತ್ತಿದೆ. ಈಸ್ ಆಪ್ ಡೂಯಿಂಗ್ ಬಿಜಿನೆಸ್ ,ಕೈಗಾರಿಕಾ ನೀತಿಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಿದೆ. ವಿದೇಶಿ ಬಂಡವಾಳದ ಪ್ರಮುಖವಾದ ಮಾನದಂಡ. ಕಳೆದ 4 ತ್ರೈಮಾಸಿಕ ಗಳಿಂದ ಕರ್ನಾಟಕಕ್ಕೆ ಶೇ 38 ರಷ್ಟು ವಿದೇಶಿ ನೇರ ಬಂಡವಾಳದ ಹರಿದು ಬರುತ್ತಿದೆ. ಅದು ಮುಂದುವರೆಯುತ್ತಿದೆ. ಕಳೆದ 3 ವರ್ಷಗಳಿಂದ ನಾವೀನ್ಯತಾ ಸೂಚ್ಯಂಕದಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ.

ಜಗತ್ತಿಗಾಗಿ ನಿರ್ಮಿಸಿ

ಅಂತಾರಾಷ್ಟ್ರೀಯ, ಜಾಗತಿಕ ಪೈಪೋಟಿಯ ಸಂದರ್ಭದಲ್ಲಿ ಕರ್ನಾಟಕದ ಶಕ್ತಿ ಬಳಕೆ ಯಾಗುತ್ತಿದೆ. ಕರ್ನಾಟಕ ಸನ್ನದ್ದ ವಾಗಿದೆ. ಜಾಗತಿಕ ಅಗತ್ಯಗಳಿಗೆ ಕರ್ನಾಟಕ ಸ್ಪಂದಿಸಲು ಸಿದ್ದವಿದೆ. ಅದಕ್ಕಾಗಿಯೇ ನಮ್ಮ ಘೋಷವಾಕ್ಯ ಬಿಲ್ಡ್ ಫಾರ್ ದಿ ವರ್ಲ್ಡ್ ಆಗಿದೆ. ನಮಗಾಗಿ ಉತ್ಪಾದನೆ ಮಾಡಿಕೊಂಡಿದ್ದೇವೆ. ಈಗ
ಜಾಗತಿಕ ಬದಲಾವಣೆಯ ಪರಿಸ್ಥಿತಿ ಯಲ್ಲಿ ಈಶಾನ್ಯ ಬ್ಲಾಕ್ ಗಳಲ್ಲಿ ಹೆಚ್ಚು ಅವಕಾಶಗಳಿರುವ ಸಂದರ್ಭದಲ್ಲಿ ನಮ್ಮ ಗುರಿ ಹಾಗೂ ಹಿಗ್ಗಿಸಿದ್ದೇವೆ. ನಮ್ಮ ಕೈಗಾರಿಕೆಗಳ ಮೇಲ್ದರ್ಜೆಗೇರಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ವಿಸ್ತರಣೆ ಗಿಂತಲೂ ಇದು ದೊಡ್ಡದು ಎಂದರು.

ಔದ್ಯೋಗಿಕ ರಂಗದ ಪೈಪೋಟಿ
1992 ರಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣವಾದ ನಂತರ ಇಡೀ ಜಗತ್ತಿನ ಔದ್ಯೋಗಿಕ ಕ್ಷೇತ್ರ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಇದರ ಜೊತೆಗೆ ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದವಾಯಿತು. ಇವೆರಡರ ನಂತರ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಉಂಟಾಗಿದೆ. ಇದರಿಂದ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ತಯಾರಾಗಿದ್ದು ಇಡೀ ಜಗತ್ತಿನ ಮಾರುಕಟ್ಟೆಯಲ್ಲಿ ಮಾರುವ ವಾತವರಣವಿದೆ. ಔದ್ಯೋಗಿಕ ರಂಗದ ಪೈಪೋಟಿ ಸ್ಥಳೀಯ ಎನ್ನುವುದಕ್ಕಿಂತ ಜಾಗತಿಕವಾಗಿ ಹೆಚ್ವಿದೆ. ಭಾರತ ಪ್ರಗತಿಪರವಾದ ದೇಶ. ಇಲ್ಲಿ ಆರ್ಥಿಕ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಆರ್ಥಿಕ ಹಿಂಜರಿತ ಇಡೀ ಜಗತ್ತಿನಲ್ಲಿ ಆಗಿದೆ. ಕೋವಿಡ್ ಮುಕ್ತ ವಾದ ನಂತರ ಆರ್ಥಿಕ ಬೆಳವಣಿಗೆ ಕೆಲವು ದೇಶಗಳಲ್ಲಿ ಇಂದಿಗೂ ಪ್ರಾರಂಭ ವಾಗಿಲ್ಲ. ಕೆಲವು ದೇಶಗಳು ಹಿಂದುಳಿದಿವೆ, ಕೆಲವು ಪ್ರಬಲ ರಾಷ್ಟ್ರಗಳಾದ ಅಮೆರಿಕಾ, ಕೆನಡಾ, , ಯೂರೋಪಿನ ಎಲ್ಲಾ ದೇಶಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗಿವೆ. ಇಂಥ ಸನ್ಮಿವೇಶದಲ್ಲಿ ಭಾರತ ಶೇ 8 ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಿರುವುದು ಭರವಸೆಯ ಸಂದೇಶ ಎಂದು ಭಾವಿಸುತ್ತೇನೆ ಎಂದರು.

ದೇಶದ ಎಲ್ಲಾ ರಾಜ್ಯಗಳಲ್ಲಿ ಉದ್ಯೋಗ ಹೆಚ್ಚಿಸುವ ಬಗ್ಗೆ ಪೈಪೋಟಿಯೂ ಇದೆ. ನಮ್ಮ ಕರ್ನಾಟಕದಲ್ಲಿ 5 ನೇ ಜಾಗತಿಕ ಹೂಡಿಕೆದಾರರ ಸಮಾವೇಶ-ಇನ್ವೆಸ್ಟ್ ಕರ್ನಾಟಕ ಜರುಗಲಿದೆ ಎಂದರು.

ಭಾರತಕ್ಕೆ ಬಹಳ ದೊಡ್ಡ ಅವಕಾಶವಿದೆ
ಹಿಂದಿನ ನಾಲ್ಕು ಸಮ್ಮೇಳನಗಳ ಯಶಸ್ಸು ಹಾಗೂ ಪರಿಣಾಮ ಚರ್ಚೆಯ ವಿಚಾರ. ಆ ಚರ್ಚೆಗೆ ಹೋಗದೇ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ, ಬೇರೆ ಬೇರೆ ದೇಶಗಳು ಚೈನಾ ಪ್ಲಸ್ ಒನ್ ಎನ್ನುವ ನೀತಿಯನ್ನು ಅಳವಡಿಸಿಕೊಂಡಿವೆ. ಚೀನಾ ದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿತ ಮಾಡಿಕೊಂಡಿರುವ ಹಲವಾರು ದೇಶಗಳಿವೆ. ಈಶಾನ್ಯ ಭಾಗದಲ್ಲಿ ಚೀನಾಕ್ಕೆ ಪ್ರತಿಬಂಧ ಇರುವುದರಿಂದ ಭಾರತಕ್ಕೆ ಬಹಳ ದೊಡ್ಡ ಅವಕಾಶವಿದೆ ಎಂದರು

ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ

https://pragati.taskdun.com/politics/m-p-renukacharyabrother-sonmissing/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button