
ಪ್ರಗತಿವಾಹಿನಿ ಸುದ್ದಿ; ಟೆಹ್ರಾನ್: ಇರಾನ್ ನಲ್ಲಿ 2017ರಲ್ಲಿ ಉಂಟಾಗಿದ್ದ ಆರ್ಥಿಕ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದ ಪತ್ರಕರ್ತನೊಬ್ಬನನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿದೆ.
ಆನ್ ಲೈನ್ ಮುಲಕ ಪ್ರಚಾರ ಮಾಡಿ, ಜನರನ್ನು ಪ್ರಚೀದಿಸಿ ಪ್ರತಿಭಟನೆ ನಡೆಸುವಂತೆ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಪತ್ರಕರ್ತ ರುಹೊಲ್ಲಾಹ್ ಝಾಮ್ ಜೈಲುಶಿಕ್ಷೆಗೆ ಗುರಿಯಾಗಿದ್ದ. ಕಳೆದ ಜೂನ್ ನಲ್ಲಿ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. ಇದೀಗ ಝಾಮ್ ನನ್ನು ಗಲ್ಲಿಗೇರಿಸಲಾಗಿದೆ.
ಝಾಮ್ ವೆಬ್ ಸೈಟ್ ಹಾಗೂ ಮೆಸೇಜಿಂಗ್ ಅಪ್ಲಿಕೇಷನ್ ನಿಂದ ಟೆಲಿಗ್ರಾಂ ಚಾನಲ್ ಮೂಲಕ ಇರಾನ್ ನ ಶಿಯಾ ಪ್ರಜಾಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದ.