ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ : ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಶಂಕಿತ ಐಸಿಸ್ ಭಯೋತ್ಪಾದಕನನ್ನು ಭಯೋತ್ಪಾದನಾ ನಿಗ್ರಹ ದಳ ದೆಹಲಿಯಲ್ಲಿ ಬಂಧಿಸಿದೆ.
ಶಾನವಾಜ್ @ ಶಫಿ ಉಜ್ಜಾಮ ಬಂಧಿತ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶಾನವಾಜ್ ನನ್ನು ಐಸಿಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ತನಿಖಾ ದಳದವರು ಹುಡುಕುತ್ತಿದ್ದರು. ಆತನನ್ನು ಈ ಹಿಂದೆ ಪುಣೆಯಲ್ಲಿ ಬಂಧಿಸಲಾಗಿತ್ತು. ಆದರೆ ಚಾಲಾಕಿತನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ನಂತರ ಆತ ದೆಹಲಿಗೆ ಓಡಿಹೋಗಿ ತಲೆಮರೆಸಿಕೊಂಡಿದ್ದ.
ಈತ ಪುಣೆಯಲ್ಲಿ ಐಸಿಸ್ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದ್ದು ಈತನ ಬಗ್ಗೆ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಈತನ ತೀವ್ರ ತಲಾಶೆಯಲ್ಲಿ ತೊಡಗಿದ್ದ ತನಿಖಾದಳದವರು ಕೊನೆಗೂ ಬಂಧಿಸಿ ತನಿಖೆಗೆ ಗುರಿಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ