Cancer Hospital 2
Laxmi Tai Society2
Beereshwara add32

*ಇಸ್ರೋದಿಂದ ಮತ್ತೊಂದು ಮೈಲುಗಲ್ಲು; ಯಶಸ್ವಿಯಾಗಿ ಗಮ್ಯಸ್ಥಾನ ತಲುಪಿದ ಆದಿತ್ಯ ಎಲ್-1*

Anvekar 3

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಆದಿತ್ಯ ಎಲ್-1 ತನ್ನ ಅಂತಿಮ ಗಮ್ಯಸ್ಥಾನವನ್ನು ಯಶಸ್ವಿಯಾಗಿ ತಲುಪಿದ್ದು, ಇಸ್ರೋ ಸೂರ್ಯಯಾನ ಯಶಸ್ವಿಯಾಗಿದೆ.

ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಸೂರ್ಯಯಾನದ ಆದಿತ್ಯ ಎಲ್-1 ತನ್ನ ಪ್ರಯಾಣ ಆರಂಭಿಸಿದ ನಾಲ್ಕು ತಿಂಗಳ ಬಳಿಕ ಅಂತಿಮ ಕಕ್ಷೆ ಯಶಸ್ವಿಯಾಗಿ ತಲುಪಿದೆ. ಈ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.

Emergency Service

ಆದಿತ್ಯ ಎಲ್-1 ಯಶಸ್ವಿಯಾಗಿ ಎಲ್ 1 ಬಿಂದುವಿನ ಸುತ್ತ ಹಾಲೋ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.


Gokak Jyotishi add 8-2
Bottom Add3
Bottom Ad 2

You cannot copy content of this page