ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಪುಲ್ವಾಮಾ ದಾಳಿ ಮಾದರಿಯಲ್ಲೇ ಉಗ್ರರು ಮತ್ತೊಂದು ಕಾರ್ ಬಾಂಬ್ ದಾಳಿ ನಡೆಸಲು ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಪುಲ್ವಾಮದಲ್ಲಿ 20 ಕಿಲೋಗೂ ಹೆಚ್ಚು ತೂಕದ ಐಇಡಿ ಸ್ಫೋಟಕಗಳಿಗಳಿರುವ ಕಾರನ್ನು ಭದ್ರತಾ ಪಡೆಗಳು ತಡೆಹಿಡಿದಿದ್ದು, ಸಂಭವಿಸಲಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಹ್ಯುಂಡೆ ಸ್ಯಾಂಟ್ರೊ ಕಾರು ಹಾಗೂ ಅದರಲ್ಲಿ ಸಾಗಿಸಲಾಗುತ್ತಿದ್ದ ಭಾರಿ ಸ್ಫೋಟಕಗಳನ್ನು ಭದ್ರತಾ ಸಿಬ್ಬಂದಿ ನಾಶ ಪಡಿಸಿದ್ದಾರೆ. ಇದರೊಂದಿಗೆ ದೊಡ್ಡ ಮಟ್ಟದ ಉಗ್ರ ದಾಳಿ ತಪ್ಪಿದಂತಾಗಿದೆ.
ಕಳೆದ ವರ್ಷ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಉಗ್ರರ ಕಾರೊಂದು ಭದ್ರತಾ ಪಡೆಗಳ ಪಹರೆ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 40 ಸೈನಿಕರು ಸಾವನ್ನಪ್ಪಿದ್ದರು. ಗುಪ್ತಚರ ಇಲಕಹೆ ಮಾಹಿತಿ ಹಿನ್ನಲೆಯಲ್ಲಿ ಭದ್ರತಾ ಪಡೆಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಈ ಹಿನ್ನಲೆಯಲ್ಲಿ ಐಇಡಿ ಸ್ಫೋಟಕ ತುಂಬಿದ್ದ ಸ್ಯಾಂಟ್ರೊ ಕಾರು ಸಿಕ್ಕಿಬಿದ್ದಿದೆ.
ಬಾಂಬ್ಗಳಿದ್ದ ಕಾರು ನಕಲಿ ನೊಂದಣಿ ಸಂಖ್ಯೆ ಹೊಂದಿತ್ತು. ಚೆಕ್ ಪಾಯಿಂಟ್ ಬಳಿ ಕಾರನ್ನು ಪರಿಶೀಲಿಸಲು ತಡೆಯಲಾಯಿತು. ಆದರೆ, ಕಾರಿನ ಚಾಲಕ ವೇಗ ಹೆಚ್ಚಿಸಿ ಬ್ಯಾರಿಕೇಡ್ ಬಿಳಿಸಿ ಹೋಗಲು ಯತ್ನಿಸಿದ. ಆಗ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಕಾರಿನ ಚಾಲಕ ವಾಹನ ಬಿಟ್ಟು ಕೂಡಲೇ ಪರಾರಿಯಾಗಿದ್ದಾನೆ. ಆಗ ಕಾರನ್ನು ಪರಿಶೀಲಿಸಿದಾಗ ಐಇಡಿ ಸ್ಫೋಟಕಗಳಿರುವುದು ಗೊತ್ತಾಗಿದೆ. ಕಾರನ್ನು ವಶಕ್ಕೆ ಪಡೆದು ಬಾಂಬ್ ನಿಷ್ಕ್ರಿಯಗೊಳಿಸಲಾಗಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ