Latest

ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಉಗ್ರನ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಜಮ್ಮು-ಕಾಶ್ಮೀರ ಪೊಲೀಸರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಕಾಶ್ಮೀರ ಮೂಲದ ತಾಲಿಬ್ ಹುಸೇನ್ ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ತಾಲಿಬ್ ಹುಸೇನ್ ತಾಲಿಕ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಶ್ರೀರಾಂಪುರ ವ್ಯಾಪ್ತಿಯಲ್ಲಿ ಮಸೀದಿ ಪಕ್ಕದಲ್ಲಿಯೇ ರೂಮ್ ಬಾಡಿಗೆ ಪಡೆದು ವಾಸವಾಗಿದ್ದ.

ಸುಮಾರು 8 ವರ್ಷಗಳಿಂದ ತಾಲಿಬ್ ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಮೂಲತ: ಕಾಶ್ಮಿರದವನಾಗಿರಿವ ತಾಲೀಬ್ ಹುಸೇನ್ ಬೆಂಗಳೂರಿಗೆ ಬಂದು ಹೆಸರು ಬದಲಿಸಿಕೊಂಡಿದ್ದ. ಬಿಎನ್ ಎಲ್ ಆರ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ.
ಪಠ್ಯ ಪರಿಷ್ಕರಣೆ ವಿಚಾರ; 2 ಮಹತ್ವದ ನಿರ್ಧಾರ ಪ್ರಕಟಿಸಿದ ಸಚಿವ ಬಿ.ಸಿ.ನಾಗೇಶ್

Home add -Advt

Related Articles

Back to top button