Latest

ಎಲ್ ಪಿಜಿ ಸಿಲಿಂಡರ್ ದರ ಮತ್ತಷ್ಟು ಏರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬೆಲೆ ಏರಿಕೆ ಬಿಸಿ ನಡುವೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ. ಎಲ್ ಪಿಜಿ ಸಿಲಿಂಡರ್ ದರ ಮತ್ತಷ್ಟು ಏರಿಕೆಯಾಗಿದೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ದರ 102 ರೂ ಏರಿಕೆಯಾಗಿದ್ದು, ದೆಹಲಿಯಲ್ಲಿ ಸಿಲಿಂಡರ್ ದರ 2,355.50 ರೂಪಾಯಿಗೆ ಏರಿಕೆಯಾಗಿದೆ.

ತಕ್ಷಣದಿಂದಲೇ ಹೊಸ ದರ ಜಾರಿಗೆ ಬರಲಿದೆ. ಏಪ್ರಿಲ್ 1ರಂದು ವಾಣಿಜ್ಯ ಸಿಲಿಂಡರ್ ದರ 250 ರೂ ಏರಿಕೆಯಾಗಿತ್ತು. ಇದೀಗ ತಿಂಗಳ ಮೊದಲ ದಿನವೇ ಮತ್ತೆ 102 ರೂ ಏರಿಕೆಯಾಗಿದ್ದು, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರ ಜೇಬಿಗೆ ಅತ್ತಶ್ಟು ಕತ್ತರಿ ಬೀಳಲಿದೆ.
ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಸ್ನೇಹ ಸದಾ ಇರಲಿ

Related Articles

Back to top button