ಸಮಾಜದ ಬೆಳವಣಿಗೆಯ ಜವಾಬ್ದಾರಿ ಹೊತ್ತ ಪ್ರತಿಯೊಬ್ಬರೂ ಪತ್ರಕರ್ತರು: ಬಿ. ನಾರಾಯಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತ್ರಿಕೋದ್ಯಮ ಕೇವಲ ಸಂಘಟನೆಗಳಿಗೆ ಸೀಮಿತವಲ್ಲ. ರಾಜ್ಯದಲ್ಲಿ ಅದೆಷ್ಟೋ ಅಸಂಘಟಿತ ಪತ್ರಕರ್ತರು ಇದ್ದಾರೆ. ಇತಿಹಾಸದಲ್ಲಿ ಪತ್ರಿಕೋದ್ಯಮ ತಮ್ಮ ಬೆಳವಣಿಗೆಗೆ ವಯಕ್ತಿಕ ಜೀವನವನ್ನು ಲೆಕ್ಕಿಸದೆ ಅನೇಕ ಪತ್ರರ‍್ತರು ಸೇವೆ ಸಲ್ಲಿಸಿದ್ದಾರೆ. ಸಮಾಜದ ಏಳಿಗೆಗೆ ಶ್ರಮಿಸುವ ಪ್ರತಿಯೊಬ್ಬರೂ ಪತ್ರಕರ್ತರೇ ಎಂದು
ಬೆಂಗಳೂರಿನ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ಬಿ. ನಾರಾಯಣ ಅವರು ಹೇಳಿದರು.
ನಗರದ ಯುಕೆ-27 ಹೋಟೆಲ್ ನಲ್ಲಿ ಭಾನುವಾರ ನಡೆದ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇರುವ ಅದೆಷ್ಟೋ ಪತ್ರರ‍್ತರು ಯಾವುದೇ ಸೌಲಭ್ಯ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಪತ್ರಕರ್ತರಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳಿಲ್ಲ, ಮಾಸಿಕ ಪಿಂಚಣಿಗಳಿಲ್ಲ, ಹೀಗೆ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ ಅಂತವರಿಗೆ ಸ್ಪಂದಿಸುವುದೇ ರ‍್ನಾಟಕ ರ‍್ನಲಿಸ್ಟ್ ಯೂನಿಯನ್ ಕಾರ್ಯವೈಖರಿಯಾಗಿದೆ ಎಂದು ತಿಳಿಸಿದರು.
ಪತ್ರಿಕೆಯಲ್ಲಿ ಕೆಲಸ ಮಾಡುವ ವರದಿಗಾರರು, ಸಂಪಾದಕರು ಮಾತ್ರ ಪತ್ರಿಕೋದ್ಯಮದ ಅಂಗವಾಗಿಲ್ಲ. ಪತ್ರಿಕೆ ಹಂಚಿಕೆ ಮಾಡುವ ಪೇಪರ್ ಬಾಯ್, ಪೇಜ್ ಮೇಕರ್ ಸೇರಿದಂತೆ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತವರಿಗೂ ಕಾರ್ಮಿಕರು ಎಂದು ಪರಿಗಣಿಸಲಾಗುವುದು ಕಾರ್ಮಿಕ ಇಲಾಖೆಯ ಕಾಯ್ದೆಯಲ್ಲಿ ಬರುವ ಅವರ ಹಕ್ಕುಗಳನ್ನು ತಿಳಿಸಿ, ಸೌಲಭ್ಯ ಒದಗಿಸುವ ಕಾರ್ಯ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕ ಮಾಡಲಿದೆ ಎಂದು ತಿಳಿಸಿದರು.
ಪತ್ರಿಕಾ ಕಾರ್ಮಿಕರಿಗೆ ಜೀವ ವಿಮೆ:
ಸಂಘಟನೆ ಮೂಲಕ ಅನಾವಶ್ಯಕವಾಗಿ ಹಾರ, ತುರಾಯಿ, ಶಾಲುಗಳನ್ನು ಖರೀದಿ ಮಾಡಿ ದುಂದು ವೆಚ್ಚ ಮಾಡದೆ, ಪತ್ರಿಕೆಗಳಲ್ಲಿ ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಗುಂಪು ಜೀವನ ವಿಮೆ (ಗ್ರೂಪ್ ಇನ್ಸೂರೆನ್ಸ್) ಮಾಡಿಕೊಡಬೇಕು. ಇದರಿಂದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದರು.
ಪ್ರಸ್ತುತ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಇರುವುದಿಲ್ಲ. ಅಂತವರಿಗೆ ಸಹಾಯ ಹಸ್ತ ಚಾಚಬೇಕು ಕಾರ್ಮಿಕ ಇಲಾಖೆ ವತಿಯಿಂದ ಕಾಯ್ದೆ ಅಡಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತರನ್ನು ಗೌರವಿಸಿ:
ಈ ಮೊದಲು ಪತ್ರಿಕೋದ್ಯಮವು ಪತ್ರಿಕಾ ರಂಗವಾಗಿತ್ತು. ಆದರೆ ವಿದ್ಯುನ್ಮಾನಗಳ ಬೆಳವಣಿಗೆಯಿಂದ ಪತ್ರಿಕಾರಂಗವೂ ಪತ್ರಿಕೋದ್ಯಮವಾಗಿ ಮಾರ್ಪಟ್ಟಿತು. ಪತ್ರಿಕೋದ್ಯಮ ಬೆಳವಣಿಗೆ ಕಂಡಿದ್ದು ಹಿರಿಯ ಪತ್ರಕರ್ತರಿಂದ, ಅವರು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪತ್ರಿಕಾರಂಗವಾಗಿತ್ತು. ಅವರು ಯಾವುದೇ ಅಪೇಕ್ಷೆ ಇಲ್ಲದೆ ಅನೇಕ ಕಷ್ಟಗಳ ನಡುವೆ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ ಅಂತಹ ಹಿರಿಯ ಪತ್ರಕರ್ತರನ್ನು ಗೌರವದಿಂದ ಕಾಣಬೇಕು ಎಂದರು.
ಡಿಜಿಟಲ್ ಪತ್ರಿಕೋದ್ಯಮ ಬೆಳವಣಿಗೆ:
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳಗಾವಿ ಜಿಲ್ಲಾ ಘಟಕ ಉದ್ಘಾಟನೆಯಾಗಿದ್ದು ನಮಗೆ ಹೆಮ್ಮೆ ಎನಿಸುತ್ತಿದೆ. ಒಬ್ಬ ಪತ್ರಕರ್ತ ಒಂದು ಸಂಘಟನೆ ಇದ್ದ ಹಾಗೆ .ಆದರೆ ಪ್ರಸ್ತುತ ದಿನಮಾನಗಳಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಯಾವುದೇ ಆರೋಗ್ಯ ವಿಮೆ ಹಾಗೂ ಸಾಮಾಜಿಕ ಭದ್ರತೆ ಇಲ್ಲದೆ ಇರುವುದು ವಿಷಾದನೀಯವಾಗಿದೆ ಎಂದರು.
ಬೆಳಗಾವಿ ಜಿಲ್ಲಾ ಕಾರ್ಮಿಕ ಇಲಾಖೆಯ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆಗೆ ಹಾಗೂ ಪತ್ರಿಕಾ ದಿನಾಚರಣೆಗೆ ಶುಭಾಶಯಗಳು ಕೋರಿದರು.
ಸುದ್ದಿ ನೀಡುವ ಪತ್ರಕರ್ತರು ಕಾರ್ಮಿಕರು ಕೂಡ ಕಾರ್ಮಿಕ ಇಲಾಖೆಯ ಕಾಯ್ದೆಯಡಿ ಬರುತ್ತಾರೆ. ಪಿಎಫ್ ಇಲ್ಲದೇ ಅಸಂಘಟಿತ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಇ- ಶ್ರಮ್ ಯೋಜನೆಯಡಿ ನೋಂದಣಿ ಮಾಡಿ ಅವರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರತ್ನಾಕರ ಗೌಂಡಿ, ಜಿಲ್ಲೆಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಘಟಕದ ಅವಶ್ಯಕತೆ ಇದೆ. ಕೇವಲ ಆಯ್ದ ಪತ್ರಕರ್ತರು ಮಾತ್ರವಲ್ಲದೇ ಎಲ್ಲ ಗ್ರಾಮೀಣ ಹಾಗೂ ಅಸಂಘಟಿತ ಪತ್ರಕರ್ತರ ಹಕ್ಕುಗಳ ಗುರುತಿಸಲು ಈ ಸಂಘಟನೆ ಬಂದಿದೆ ಎಂದು ತಿಳಿಸಿದರು.
ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ಕಾರ್ಮಿಕರಿಗೂ ಹಾಗೂ ಪತ್ರಕರ್ತರಿಗೂ ಸಿಗುವ ಸ್ಥಾನ, ಮಾನ, ಗೌರವ ನೀಡುವ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಅಶೋಕ ಜೋಶಿ, ಶಿವನಗೌಡ ಗಿಡಗೇರಿ (ಪಾಟೀಲ), ಬಾಪುಗೌಡ ಪಾಟೀಲ, ಸದಾನಂದ ಬಾಮನೆ ಅವರನ್ನು ಸನ್ಮಾನಿಸಲಾಯಿತು ಜೊತೆಗೆ ಕೆಜೆಯು ಜಿಲ್ಲಾ ಘಟಕದ ಪದಧಿಕಾರಿಗಳು ಹಾಗೂ ಸದಸ್ಯರಿಗೆ ಸನ್ಮಾನಿಸಲಾಯಿತು.
ಅನುಮೋದನೆ ಆದೇಶ ಪ್ರತಿ ವಿತರಣೆ:
ಇದೇ ವೇಳೆ ಕೆಜೆಯು ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಗುಡಗೆನಟ್ಟಿ ಅವರಿಗೆ ಅಧಿಕೃತ ಅನುಮೋದನೆ ಪತ್ರ ನೀಡಿ ಗೌರವಿಸಲಾಯಿತು.
ಕೆಜೆಯು ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ, ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಶೋಕ ಸನದಿ, ಖಜಾಂಚಿ ನಿತೀಶ್ ಕಿತ್ತೂರ, ಸದಸ್ಯರಾದ ವಿವೇಕಾನಂದ ಕತ್ತಿ, ಲಕ್ಷ್ಮಣ ಗುರವ, ಪೂಜಾ ಗುಡಗೆನಟ್ಟಿ, ವಿವೇಕಾನಂದ ಕುದುರಿಮಠ, ಯಲ್ಲಪ್ಪ ಚಿಕ್ಕೋಡಿ ಉಪಸ್ಥಿತರಿದ್ದರು.
ದೀಪಾ ಪದಕಿ, ಜಯಶ್ರೀ ಕ್ಷೀರಸಾಗರ, ಸುಜಾತಾ ಕುಲಕರ್ಣಿ ನಾಡಗೀತೆ ಪ್ರಸ್ತುತ ಪಡಿಸಿದರು.
ನಿರಾಜಾ ಗಣಾಚಾರಿ ನಿರೂಪಿಸಿ, ವಂದಿಸಿದರು.
ಜುಲೈ 16ರಂದು ಬೆಳಗಾವಿಯಲ್ಲಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ 78 ನೇ ಸ್ಮೃತಿ ಸಂಗೀತೋತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ