Latest

ಪತ್ರಕರ್ತನನ್ನೇ ಸಜೀವ ದಹನ ಮಾಡಿದ ಪಾಪಿಗಳು

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಪತ್ರಕರ್ತ ಮತ್ತು ಆತನ ಸ್ನೇಹಿತನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಬಲರಾಂಪುರದಲ್ಲಿ ನಡೆದಿದೆ.

ಪತ್ರಕರ್ತ ರಾಕೇಶ್ ಸಿಂಗ್ ಹಾಗೂ ಆತನ ಸ್ನೇಹಿತ ಪಿಂಟೂ ಸಾಹೂ ಮೃತರು. ಆರೋಪಿ ಕೇಶವಾನಂದ ಮಿಶ್ರಾ ತಾಯಿ ಸರಪಂಚ್ ಆಗಿದ್ದು ಆಕೆಯ ಭ್ರಷ್ಟಾಚಾರವನ್ನು ರಾಕೇಶ್ ಸಿಂಗ್ ಬಯಲಿಗೆಳೆದಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ್ ಮಿಶ್ರಾ, ಕೇಶವಾನಂದ ಮಿಶ್ರಾ, ಅಕ್ರಂ ಅಲಿ ಎಂಬುವವರನ್ನು ಬಂಧಿಸಲಾಗಿದೆ.

 

Home add -Advt

Related Articles

Back to top button