Kannada NewsKarnataka NewsLatest

*ಜಡ್ಜ್ ಕಾರು, ಬಸ್ ಹಾಗೂ ಇನ್ನೊಂದು ಕಾರಿನ ನಡುವೆ ಸರಣಿ ಅಪಘಾತ; ಕಾರಿನಲ್ಲಿ ದನದ ಮಾಂಸ ಪತ್ತೆ*

ಶಿವಮೊಗ್ಗ: ನ್ಯಾಯಾಧೀಶರು ತೆರಳುತ್ತಿದ್ದ ಕಾರು, ಖಾಸಗಿ ಬಸ್ ಹಾಗೂ ಇನ್ನೊಂದು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಐಗಿನಬೈಲು ಕ್ರಾಸ್ ಬಳಿ ನಡೆದಿದೆ.

ಹೈಕೋರ್ಟ್ ನ್ಯಾಯಾಧೀಶರು ಹಾಗೂ ಶಿವಮೊಗ್ಗ ಕೋರ್ಟ್ ನ್ಯಾಯಾಧೀಶರು ಪ್ರತ್ಯೇಕ ಕಾರಿನಲ್ಲಿ ಸಿಗಂದೂರಿಗೆ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗ ಕೋರ್ಟ್ ನ್ಯಾಯಾಧೀರು ತೆರಳುತ್ತಿದ್ದ ಕಾರಿನ ಹಿಂಬದಿ ಬರುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಐಗಿನಬೈಲು ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಮತ್ತೊಂದು ಕಾರಿನಲ್ಲಿ ದನದ ಮಾಂಸ ಪತ್ತೆಯಾಗಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.

ಖಾಸಗಿ ಬಸ್ ಧರ್ಮಸ್ಥಳಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button