Kannada NewsKarnataka NewsLatestPolitics
*ಮಾಜಿ ಸಿಎಂ HDKಯಿಂದ ಶುಭ ಸುದ್ದಿ ಬಂದಿದೆ ಎಂದ ಮಾಜಿ ಸಚಿವ ಈಶ್ವರಪ್ಪ*

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮನೆ ದೇವರು ಮಲ್ಲೇಶ್ವರ, ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಹೋಮ ನಡೆಸಿದ ಕೆ.ಎಸ್.ಈಶ್ವರಪ್ಪ, ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಕುಮಾರಸ್ವಾಮಿಯವರಿಂದ ಫೋನ್ ಕರೆ ಬ್ಂದಿದ್ದು, ಶುಭ ಸುದ್ದಿ ನೀಡಿದ್ದಾರೆ ಎಂದರು.
ಇಂದು ಮಲ್ಲೇಶ್ವರ, ಚೌಡೇಶ್ವರಿ ದೇವಿಯ ವಿಶೇಷ ಪೂಜೆ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿಯೇ ಕುಮಾರಸ್ವಾಮಿಯವರು ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ. ಹಿಂದೂ ಧರ್ಮದ ಪ್ರಕಾರ ಪೂಜೆಯಂತಹ ವಿಶೇಷ ಸಂದರ್ಭದಲ್ಲಿ ಒಳ್ಳೆಯ ಸುದ್ದಿ ಬಂದರೆ ಯಶಸ್ಸು ಸಿಗುತ್ತೆ ಎಂಬ ನಂಬಿಕೆಯಿದೆ. ಹಾಗಾಗಿ ಇದಿಒಂದು ಶುಭ ಸೂಚಕ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ