Latest

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಸಾಲ ಬಾದೆಗೆ ಬೇಸತ್ತ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿಯ ಅಫಜಲ್ ಪುರದಲ್ಲಿ ನಡೆದಿದೆ.

ಮಹಾಂತಪ್ಪ (45) ಆತಹತ್ಯೆ ಮಾಡಿಕೊಂಡ ರೈತ. ಮಹಾಂತಪ್ಪ ದಿಕ್ಸಂಬಾ ಗ್ರಾಮದ ತಮ್ಮ ಹೊಲದಲ್ಲಿಯೇ ಕ್ರಿಮಿನಾಶಕ
ಸೇವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಸಾವನ್ನಪ್ಪಿದ್ದಾರೆ.

Home add -Advt

ರೈತ ಮಹಾತಪ್ಪ ಬ್ಯಾಂಕ್ ನಲ್ಲಿ ಮಾತ್ರವಲ್ಲ ಲಕ್ಷಾಂತರ ರೂಪಾಯಿ ಕೈ ಸಾಲ ಪಡೆದುಕೊಂಡಿದ್ದರು. ಈ ಬಾರಿ ಬೆಳೆ ಹಾನಿಯಾದ ಪರಿಣಾಮ ಕಂಗಾಲಾದ ರೈತ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭೀಕರ ರಸ್ತೆ ಅಪಘಾತಕ್ಕೀಡಾದ ಮತ್ತೋರ್ವ ನಟ; ಪ್ರಜ್ಞಾಹೀತ ಸ್ಥಿತಿಯಲ್ಲಿ ಸಾಯಿ ಧರಮ ತೇಜ್

Related Articles

Back to top button