Latest

ಕಿಡಿಗೇಡಿಗಳಿಗೆ ಕಿಚ್ಚಾ ಸುದೀಪ್ ಖಡಕ್ ವಾರ್ನಿಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದು, ನೀವು ಯಾರೆಂದು ಗೊತ್ತಾಗುವ ಮೊದಲು ದೇಶಬಿಟ್ಟು ಹೋಗಿಬಿಡಿ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿರುವ ಸುದೀಪ್, ವಿಷ್ಣು ಸರ್ ಪ್ರತಿಮೆ ಧ್ವಂಸ ಮಾಡಿರುವ ವಿಚಾರ ಗೊತ್ತಾಯಿತು. ನಾನು ಓರ್ವ ಅಭಿಮಾನಿಯಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ಈ ಕೃತ್ಯ ಮನುಷ್ಯರಾದವರು ಮಾಡುವ ಕೆಲಸವಲ್ಲ… ಪ್ರತಿಮೆ ಧ್ವಂಸ ಮಾಡಿದವರು ಯಾರು, ನಿಮ್ಮ ಹೆಸರೇನು ಎಂಬುದು ತಿಳಿಯುವ ಮೊದಲು ದೇಶಬಿಟ್ಟುಹೋಗಿ. ಇಲ್ಲವಾದಲ್ಲಿ ನೀವು ಯಾರೆಂದು ಗೊತ್ತಾದ ದಿನ ನಡೆಯುವ ಘಟನೆಯೆ ಬೇರೆ. ನೀವು ಪ್ರತಿಮೆ ಧ್ವಂಸ ಮಾಡಿದ್ದಕ್ಕಿಂತ ಹೀನಾಯವಾಗಿ ವಿಷ್ಣು ಸರ್ ಅಭಿಮನೈಗಳು ನಿಮ್ಮನ್ನು ಹೊಡೆದು ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

Home add -Advt

ಬೆಂಗಳೂರಿನ ಮಾಗಡಿ ರಸ್ತೆ ಟೋಲ್ ಬಳಿ ಸ್ಥಾಪಿಸಿದ್ದ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ರತರಿ ಬೆಳಗಾಗುವಷ್ಟರಲ್ಲಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ಸಾಹಸ ಸಿಂಹನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Related Articles

Back to top button