ಪ್ರಗತಿವಾಹಿನಿ ಸುದ್ದಿ; ಕಾರವಾರ: ಜನರಲ್ಲಿ ಅರಣ್ಯ ಬೆಳೆಸುವ ಮನಸ್ಸು ಇದ್ದರೆ ಮಾತ್ರ ಇಲಾಖೆಯ ಕನಸು ನನಸಾಗುತ್ತದೆ. ಗಿಡಗಳನ್ನು ನೆಟ್ಟ ಮಾತ್ರಕ್ಕೆ ಅರಣ್ಯ ಬೆಳೆಸಿದಂತಾಗುವುದಿಲ್ಲ. ಸ್ಥಳೀಯರಿಗೆ ಅರಣ್ಯದ ಬಗ್ಗೆ ಕಳಕಳಿ ಮತ್ತು ಕಾಳಜಿ ಇದ್ದಾಗ ಅರಣ್ಯ ಅಭಿವೃದ್ಧಿಯಾಗುತ್ತದೆ. ಸ್ಥಳೀಯರ ಉತ್ಸಾಹ ಹಾಗೂ ಬೆಂಬಲದಿಂದ ಇಲಾಖೆಯ ಕನಸು ನನಸಾಗುತ್ತದೆ ಎಂದು ಕಾರವಾರ ವಲಯ ಅರಣ್ಯ ಅಧಿಕಾರಿ ಜಿ.ವಿ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಸಿದ್ಧರ್ ಗ್ರಾಮದ ಶ್ರೀ ನರಸಿಂಹದೇವರ ವನದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅರಣ್ಯ ಇಲಾಖೆ, ವೈಲವಾಡ ಗ್ರಾಮ ಪಂಚಾಯತ್ ಹಾಗೂ ನರಸಿಂಹ ದೇವಸ್ಥಾನ ಕಮಿಟಿಯವರು ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಯಕ ಮಾತನಾಡಿದರು . ಸಿದ್ದರದ ನರಸಿಂಹ ದೇವರ ವನದಲ್ಲಿ ವಿಶೇಷ ರೀತಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ವನಮಹೋತ್ಸವನ್ನು ಆಚರಿಸಲಾಯಿತು.
ಸ್ಥಳೀಯ ವೈದ್ಯಾಧಿಕಾರಿ ಡಾ. ಅಶ್ವಿನಿ ಬೋರ್ಕರ್ ಮಾತನಾಡಿ ಪರಿಸರ ನಮಗೆ ಏನೆಲ್ಲ ಕೊಟ್ಟಿದೆ. ನಾವು ಪರಿಸರವನ್ನು ಅಷ್ಟೇ ಜವಾಬ್ದಾರಿಯಿಂದ ಉಳಿಸಿಕೊಳ್ಳಬೇಕಾಗಿದೆ. ನಮ್ಮ ಬದುಕಿಗೆ ಬೇಕಿರುವ ಆಮ್ಲಜನಕವನ್ನು ನೀಡುವ ಈ ಪರಿಸರವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ.ಇವತ್ತಿನ ಯುವಕರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು. ಕೆಇಬಿ ವಲಯ ವಲಯ ಅಭಿಯಂತರ ಪ್ರಶಾಂತ್ ಕುಡ್ತಾರ್ಕರ್ ಮಾತನಾಡಿ ಪರಿಸರ ಕಾಳಜಿಯಲ್ಲಿ ಜನರ ಆಸಕ್ತಿ ಅತಿ ಮುಖ್ಯ ಈ ಭಾಗದ ಯುವಕರಲ್ಲಿ ಪರಿಸರದ ಕಾಳಜಿ ಎದ್ದುಕಾಣುತ್ತಿದೆ ಎಂದರು.
ನಿವೃತ್ತ ಎಂಟಿಎನ್ಎಲ್ ಅಧಿಕಾರಿ ಸುರೇಶ್ ಗುರವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರದ ಮಹತ್ವವನ್ನು ತಿಳಿಸುವುದರ ಜೊತೆಗೆ ಮ್ಯಾಜಿಕ್ ಮಾಡುವ ಮೂಲಕ ಅರಣ್ಯದ ಮಹತ್ವವನ್ನು ತಿಳಿಸಿಕೊಟ್ಟರು.
ಸ್ಥಳೀಯ ಪಂಚಾಯತ್ ನ ಅಧ್ಯಕ್ಷ ರಾಜೇಶ್ ನಾಯ್ಕ್ , ಉಪಾಧ್ಯಕ್ಷೆ ಮೇಘ ಎಂ ಗಾವಂಕರ, ಸದಸ್ಯ ರಾಜೇಂದ್ರ ರಾಣೆ , ಗ್ರಾಮದ ಪುರೋಹಿತರಾದ ವಿಠ್ಠಲ್ ಜೋಶಿ, ದೇವಸ್ಥಾನದ ಆಡಳಿತ ಮೊಕ್ತೇಸರ ದತ್ತಾತ್ರೇಯ ಗಾವ್ಕರ್, ಅರಣ್ಯ ಇಲಾಖೆ ಫಾರೆಸ್ಟರ್ ಕೃಷ್ಣಾನಂದ ಗಾವ್ಕರ್, ಅರಣ್ಯ ರಕ್ಷಕ ಕರಿಬಸಪ್ಪ, ಹಾಗೂ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು .
ಎಲ್ಲಾ ಅತಿಥಿಗಳು ಹಾಗೂ ಗ್ರಾಮಸ್ಥರು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದರು.
ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣ; ಮಾಲಾ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ