Kannada NewsKarnataka NewsLatest

*ಕಾವೇರಿ ನದಿಯಲ್ಲಿ ಈಜಲು ಹೋಗಿ 6 ಜನ ಜಲಸಮಾಧಿ*

ಪ್ರಗತಿವಾಹಿನಿ ಸುದ್ದಿ: ಉರೂಸ್ ಗೆಂದು ಬಂದವರು ಕಾವೇರಿ ನದಿಯಲ್ಲಿ ಈಜಲು ಹೋಗಿ 6 ಜನರು ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಈ ದುರಂತ ಸಂಭವಿಸಿದೆ. ಉರೂಸ್ ಹಿನ್ನೆಲೆಯಲ್ಲಿ ದರ್ಗಾಕ್ಕೆಂದು ಬಂದಿದ್ದರು. ರಣ ಬಿಸಿಲ ಝಳವಿದ್ದ ಕಾರಣ ಸಮೀಪವೇ ಇದ್ದ ಕಾವೇರಿ ನದಿಗೆ ಈಜಲೆಂದು ಕುಟುಂಬ ಸಮೇತ ಎಂಟು ಜನರು ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ 6 ಜನರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

Home add -Advt

ಯಾಸಿನ್ (23), ಫಾತಿಮ್ (30), ನೇಹಾನ್(19), ಅಲೀಂ (13), ಹುಮಾಯೂನ್ (7) ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಕೆ.ಆರ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button