
ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಹೊಟ್ಟೆ ನೋವೆಂದು ಆಸ್ಪತ್ರೆಗೆದಾಖಲಾದ ಯುವತಿಯೊಬ್ಬಳ ಎರಡೂ ಕಿಡ್ನಿಯನ್ನೇ ವೈದ್ಯರು ತೆಗೆದಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ಗರ್ಭಕೋಶ ಸಮಸ್ಯೆಯಿಂದ ಬಳಲುತಿದ್ದ ಯುವತಿಯನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಈ ವೇಳೆ ಯುವತಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ ಡಾಕ್ಟರ್ ಶಸ್ತ್ರಚಿಕಿತ್ಸೆ ನೆಪದಲ್ಲಿ ಆಕೆಯ ಎರಡು ಕಿಡ್ನಿಯನ್ನು ಕಳ್ಳತನ ಮಾಡಿದ್ದಾರೆ.
ಎರಡು ಕಿಡ್ನಿ ತೆಗೆದ ಬಳಿಕ ಯುವತಿ ಬದುಕುವುದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಕಳುಹಿಸಿದ್ದಾನೆ. ಮನೆಗೆ ಬಂದ ಯುವತಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು ಕುಟುಬದವರು ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಆರೋಗ್ಯ ತಪಾಸಣೆ ವೇಳೆ ಆಕೆಯ ಎರಡೂ ಕಿಡ್ನಿ ತೆಗೆದಿರುವ ಸಂಗತಿ ಬಯಲಾಗಿದೆ.
ಯುವತಿ ಕುಟುಂಬ ವೈದ್ಯರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಡಾ.ಪ್ರಭಾಕರ ಕೋರೆಗೆ ರಾಷ್ಟ್ರೀಯ ಪ್ರಶಸ್ತಿ
https://pragati.taskdun.com/kannada-news/national-award-for-dr-prabhakar-kore/