Latest

ಮನೆಗೆ ಬೆಂಕಿಯಿಟ್ಟು 7 ಜನರ ಸಜೀವದಹನ ಮಾಡಿದ್ದ ವ್ಯಕ್ತಿ ಶವವಾಗಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಕೊಡಗು: ಏಪ್ರಿಲ್ 3ರಂದು ಮನೆಗೆ ಬೆಂಕಿಯಿಟ್ಟು 7 ಜನರನ್ನು ಕೊಂದ ವ್ಯಕ್ತಿ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಡಗು ಜಿಲ್ಲೆ ಕಾನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬೋಜ ಎಂಬ 55 ವರ್ಷದ ವ್ಯಕ್ತಿ ಏಪ್ರಿಲ್ 3ರಂದು ಕುಡಿದು ಬಂದು ಮಂಜ ಎಂಬುವವರ ಮನೆ ಬಾಗಿಲು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ್ದ. ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರಲಾಗದೇ ಸಾವನ್ನಪ್ಪಿದ್ದರು. ಕೃತ್ಯದ ಬಳಿಕ ಬೋಜ ಹಲವರಿಗೆ ಕರೆ ಮಾಡಿ ತಾನು ಮನೆಗೆ ಬೆಂಕಿ ಹಾಕಿದ್ದು, ಹೋಗಿ ನೋಡುವಂತೆ ಹೇಳಿದ್ದ.

Home add -Advt

ಅಂದಿನಿಂದ ನಾಪತ್ತೆಯಾಗಿದ್ದ ಬೋಜ ಈಗ ಕಾನೂರು ಗ್ರಾಮದ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಯಾವ ಕ್ಷೇತ್ರದಲ್ಲಿ ಹೆಚ್ಚು, ಯಾವ ಕ್ಷೇತ್ರದಲ್ಲಿ ಕಡಿಮೆ ಮತದಾರರು; ಸಮಗ್ರ ಮಾಹಿತಿ ಇಲ್ಲಿದೆ

Related Articles

Back to top button