Latest

ಮಗ ವಿಷ ಕುಡಿದ ಎಂದು ತಾಯಿ, ಹೆಂಡತಿಯೂ ಕುಡಿದರು ಬಳಿಕ ಏನಾಯ್ತು?

ಪ್ರಗತಿವಾಹಿನಿ ಸುದ್ದಿ; ಕೋಲಾರ: ಅನಾರೋಗ್ಯದಿಂದ ಬಳಲಿ ಬೆಂಡಾದ ಕುಟುಂಬವೊಂದರ ಮೂವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಒಬ್ಬ ಬಚಾವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ತಿರುಮಲ ಕಲ್ಯಾಣ ಮಂಟಪ ಬಳಿಯ ಆರ್.ಪಿ.ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ತಾಯಿ ಆದಿ ಲಕ್ಷ್ಮಮ್ಮ (70) , ಸೊಸೆ ಪದ್ಮಾ (46) ಮೃತ ಅತ್ತೆ-ಸೊಸೆ. ಗುರುವಾರ ರಾತ್ರಿ ಮನೆಯಲ್ಲಿ ಎಂದಿನಂತೆ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿದೆ. ಆಗ ತಾಯಿ, ಸೊಸೆ ಪದ್ಮಾ ಮತ್ತು ಮಗ ನಾಗರಾಜ್ (55) ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮ ವಿಷ ಕುಡಿದ ಅತ್ತೆ ಮತ್ತು ಸೊಸೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

Home add -Advt

ವಿಷ ಕುಡಿದ ನಾಗರಾಜ್ ತನ್ನ ಅಣ್ಣನ ಮಗನಿಗೆ ಫೋನ್ ಮಾಡಿ ಎಲ್ಲರೂ ವಿಷ ಕುಡಿದಿರುವ ವಿಷಯ ತಿಳಿಸಿದ್ದ. ತಕ್ಷಣ ಸ್ಥಳಕ್ಕೆ ಬಂದ ಮಗ ವಿಜಯ್ ಸಾವು ಬದುಕಿನ ನಡುವೆ ಇದ್ದ ನಾಗರಾಜ್‍ನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಕಳೆದ ಕೆಲವು ತಿಂಗಳುಗಳಿಂದ ನಾಗರಾಜ್ ಪತ್ನಿ ಪದ್ಮಾಗೆ ಕಾಲು ನೋವಿನ ಸಮಸ್ಯೆ ಕಾಡುತ್ತಿತ್ತು. ಆಸ್ಪತ್ರೆಗೆ ತೋರಿಸಿದರೂ ಪ್ರಯೋಜವಾಗಿರಲಿಲ್ಲ. ಹಾಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ತೋರಿಸಿದ್ದರು. ಅಲ್ಲಿ 1.5 ಲಕ್ಷದಷ್ಟು ಹಣ ಖರ್ಚಾಗುತ್ತದೆ ಅಂತ ಹೇಳಿದ್ದಾರೆ. ಆದರೆ ನಾಗರಾಜ್ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದನು. ಹೀಗಾಗಿ ಪತ್ನಿಗೆ ಚಿಕಿತ್ಸೆ ಕೊಡಿಸುವಷ್ಟು ಹಣ ಇರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಪತ್ರಿನಿತ್ಯ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಜಗಳಕ್ಕೆ ನಾಗರಾಜ್ ವಿಷ ಕುಡಿದಿದ್ದಾನೆ. ಇದನ್ನು ಕಂಡ ತಾಯಿ ಹಾಗೂ ಸೊಸೆ ಕೂಡ ವಿಷಕುಡಿದಿದ್ದಾರೆ. ಅತ್ತೆ ಸೊಸೆ ಇಬ್ಬರೂ ಸಾವನ್ನಪ್ಪಿದ್ದರೆ, ಮಗ ನಾಗರಾಜ್ ಬದುಕುಳಿದಿದ್ದು, ಸ್ಥಿತಿ ಗಂಭೀರವಾಗಿದೆ.

Related Articles

Back to top button